ನವದೆಹಲಿ: ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದೊಂದು ನಕಲಿ ಎನ್ ಕೌಂಟರ್ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರ್ತಿದೆ. ಈ ಹಿನ್ನೆಲೆ ದುಬೆ ಎನ್‌ಕೌಂಟರ್ ಪ್ರಕರಣದ ತನಿಖೆಗೆ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ಅವರನ್ನು ಜಡ್ಜ್ ಆಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೆ 3 ದಶಕಗಳಿಂದ ದುಬೆ ಪದೇ ಪದೇ ಜಾಮೀನು ಅಥವಾ ಪರೋಲ್ ಪಡೆದು ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದ ಬಗ್ಗೆಯೂ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆಯೋಗಕ್ಕೆ ನಿರ್ದೇಶಿಸಿದೆ. 65ಕ್ಕೂ ಅಧಿಕ ಕೊಲೆ ಹಾಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ದುಬೆಗೆ ಇಷ್ಟು ಬಾರಿ ಬೇಲ್ ಸಿಗಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.
ಪಟಾಕಿ ಸಂಪೂರ್ಣ ನಿಷೇಧವಿಲ್ಲ, ಅನಿಯಂತ್ರಿತ ಬಳಕೆಗೂ ಅವಕಾಶವಿಲ್ಲ: ಸುಪ್ರೀಂಕೋರ್ಟ್
ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ನಿಲುವು ವ್ಯಕ್ತಪಡಿಸಿದೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಿಲ್ಲ, ಆದರೆ ದಿನದ 24 ಗಂಟೆಯೂ...








