ಹಾಸನ : ನಿನ್ನೆ ಕೊರೊನಾ ವೈರಸ್ ಗ್ರಾಮೀಣ ಪ್ರದೇಶಗಳಲ್ಲಿ ಮರಣಮೃದಂಗ ಬಾರಿಸಲಿದೆ ಎಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಇಂದು ರಾಜರಿಗೆ ತೊಂದರೆ, ನೋವು ಕಾಯಿಲೆ, ಅಪಮಾನ, ರಾಜಭೀತಿ ಉಂಟಾಗಲಿದೆ ಎಂದಿದ್ದಾರೆ.
ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಕೊರೊನಾದಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ರಾಜಭೀತಿ ಉಂಟಾಗಲಿದೆ. ಬರುವ ದಿನಗಳು ಹೆಚ್ಚು ಅಗೋಚರವಾಗಲಿದೆ, ಭೂಮಿ ನಡುಗಲಿದೆ, ವಿಪರೀತ ಮಳೆಯಾಗಲಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಕೊರೊನಾ ವೈರಸ್ ದೊಡ್ಡದೊಡ್ಡ ಜನರನ್ನು ಅಧಿಕಾರಸ್ತರನ್ನು ಮತ್ತು ಮಂತ್ರಿಗಳನ್ನು ಬಲಿ ತೆಗೆದುಕೊಳ್ಳಲಿದೆ. ಕೊರೊನಾದಿಂದ ರಾಜರು ಮಾಡುವ ಶಾಸನಗಳು ಪ್ರಜೆಗಳ ವಿರೋಧಿಯಾಗಲಿದೆ. ದಟ್ಟವಾದ ಮೋಡ ಕವಿದು ಕತ್ತಲಾಗಲಿದೆ. ಕಾರ್ಮೋಡವಾಗಿ ಬಂದಿರುವ ಈ ಕೊರೊನಾ ಮುಂದೆ ಒಳ್ಳೆಯ ಚಿಂತನೆ ಕೊಡಲಿದೆ. ಎರಡು ಮೂರು ತಿಂಗಳಲ್ಲಿ ಕೊರೊನಾ ಕಡಿಮೆಯಾಗಲಿದೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.








