ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕ್ರಿಕೆಟ್ ರಂಗದ ಬುದ್ಧ ….!

admin by admin
July 23, 2020
in Newsbeat, Sports, ಕ್ರೀಡೆ
rahul dravid team india saakshatv
Share on FacebookShare on TwitterShare on WhatsappShare on Telegram

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕ್ರಿಕೆಟ್ ರಂಗದ ಬುದ್ಧ…!

ರಾಹುಲ್ ದ್ರಾವಿಡ್… ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅದಕ್ಕೂ ಮುನ್ನ ಭಾರತ ಎ ತಂಡ, ಭಾರತ 19 ವಯೋಮಿತಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ರು. ಇನ್ನು ಸ್ವಲ್ಪ ಫ್ಲಾಷ್ ಬ್ಯಾಕ್ ಮಾಡಿದಾಗ ರಾಹುಲ್ ದ್ರಾವಿಡ್ ಅವರ ನಿಜವಾದ ಅವತಾರಗಳ ದೃಶ್ಯಗಳು ಒಂದು ಕ್ಷಣ ಕಣ್ಣ ಮುಂದೆಯೇ ಹಾದು ಹೋಗುತ್ತವೆ.
ಅದನ್ನು ನೆನಪಿಸಿಕೊಂಡಾಗ ಅಬ್ಬಾ.. ಇಂತಹ ಒಬ್ಬ ಆಟಗಾರ ನಮ್ಮಲ್ಲಿದ್ದ. ವಿಶ್ವದ ಶ್ರೇಷ್ಠ ಬೌಲರ್‍ಗಳ ತಾಳ್ಮೆಯನ್ನು ಪರೀಕ್ಷೆ ಮಾಡಿದ್ದ ಬ್ಯಾಟ್ಸ್ ಮೆನ್ ಅಂತ ಉದ್ಘಾರ ಬರುತ್ತದೆ. ಯಾಕಂದ್ರೆ ದ್ರಾವಿಡ್ ಅವರ ಬ್ಯಾಟಿಂಗ್ ವೈಭವವೇ ಅಂತಹುದ್ದು. ಕ್ರಿಕೆಟ್ ಆಟದ ಗ್ರಾಮರ್‍ಗಳು ಅವರ ಬ್ಯಾಟಿಂಗ್ ಶೈಲಿಯಲ್ಲಿ ಅಳವಡಿಸಿಕೊಂಡಿವೆ. ಯಾವುದೇ ಅಪೇಕ್ಷೆ, ಪ್ರತಿಫಲವನ್ನು ಬಯಸದೇ ಇರುವಂತಹ ಆಟಗಾರ. ಆಸೆಯೇ ದುಃಖಕ್ಕೆ ಮೂಲ ಅನ್ನುವಂತೆ ಕ್ರಿಕೆಟ್ ನನ್ನ ಬದುಕಿನ ಮೂಲ ಎಂಬುದನ್ನು ಮೈಗೂಡಿಸಿಕೊಂಡಿರುವ ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ನ ಬುದ್ಧ
ಹೌದು, ರಾಹುಲ್ ದ್ರಾವಿಡ್ ಬಗ್ಗೆ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಕಿರಣ್ ಮೋರೆ ಮನಬಿಚ್ಚಿ ಮಾತನಾಡಿದ್ದಾರೆ. ಆಟಗಾರನಾಗಿ, ನಾಯಕನಾಗಿ ರಾಹುಲ್ ದ್ರಾವಿಡ್ ಅವರ ಬದ್ಧತೆ, ಸಾಧನೆ ಏನು ಎಂಬುದನ್ನು ಮನಸಾರೆ ಕೊಂಡಾಡಿದ್ದಾರೆ. ಆದ್ರೆ ರಾಹುಲ್ ದ್ರಾವಿಡ್‍ಗೆ ತನ್ನ ಸಾಧನೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಅದು ಕ್ರಿಕೆಟ್ ಪುಸ್ತಕದಲ್ಲಿ ದಾಖಲೆಯಾಗಿ ಉಳಿದಿದೆ. ಇದೀಗ ಕಿರಣ್ ಮೋರೆ ರಾಹುಲ್ ದ್ರಾವಿಡ್ ಸಾಧನೆಯನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.
ದ್ರಾವಿಡ್‍ಗೆ ತನ್ನನ್ನು ತಾನು ಮಾರ್ಕೆಟಿಂಗ್ ಮಾಡಿಕೊಂಡಿಲ್ಲ. ಆದ್ರೆ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕನಾಗಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಅವರ ಕೊಡುಗೆ ಅನನ್ಯ. ಹೀಗಾಗಿ ಅವರು ಒಂದು ಹೆಜ್ಜೆ ಮುಂದಿದ್ದಾರೆ. ಅವರ ನಾಯಕತ್ವದ ಬಗ್ಗೆ ನಾನು ಏನು ಹೇಳಬೇಕಾಗಿಲ್ಲ. ಎಲ್ಲವೂ ಅಂಕಿ ಅಂಶಗಳೇ ಹೇಳುತ್ತವೆ ಎಂದು ಕಿರಣ್ ಮೋರೆ ಅಭಿಪ್ರಾಯಪಟ್ಟಿದ್ದಾರೆ.
ದ್ರಾವಿಡ್ ಅವರನ್ನು ನಾಯಕತ್ವದಿಂದ ಕೈಬಿಡಲಾಗಿಲ್ಲ. ತಾನೇ ನಾಯಕತ್ವವನ್ನು ಬಿಟ್ಟುಕೊಟ್ಟಿರುವುದು. ಇಂತಹ ಅಪರೂಪದ ವ್ಯಕ್ತಿ ಇನ್ನೊಬ್ಬ ಸಿಗಲ್ಲ. ನನಗೆ ದ್ರಾವಿಡ್ ಬಗ್ಗೆ ಹೆಮ್ಮೆ ಇದೆ. ಯಾರು ಕೂಡ ನಾಯಕತ್ವವನ್ನು ಬಿಟ್ಟುಕೊಡಲ್ಲ. ಅಂತಹುದರಲ್ಲಿ ದ್ರಾವಿಡ್ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ದ್ರಾವಿಡ್ ಒಬ್ಬ ಅಪರೂಪದ ವ್ಯಕ್ತಿ, ಹಾಗೇ ತುಂಬಾ ಪ್ರಾಮಾಣಿಕ. ಆಟದ ಮೇಲೆ ಸಾಕಷ್ಟು ಬದ್ಧತೆಯನ್ನಿಟ್ಟುಕೊಂಡಿದ್ದರು ಎಂದು ಕಿರಣ್ ಮೋರೆ ಹೇಳಿದ್ದಾರೆ.
ಅದೇ ರೀತಿ ಧೋನಿ ಕೂಡ. ಧೋನಿ ಕೂಡ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ. ಧೋನಿಗೆ ತಾನು ಏನು ಮಾಡಲು ಬಯಸುತ್ತೇನೆ. ತಂಡಕ್ಕೆ ಏನು ಬೇಕು ಹೀಗೆ ಹಲವಾರು ವಿಚಾರಗಳು ಗೊತ್ತಿದ್ದವು. ಇದು ಎಲ್ಲರಿಗೂ ಒಂದು ಸಂದೇಶವಾಗಿದೆ. ಇನ್ನು ಅನಿಲ್ ಕುಂಬ್ಳೆ ಕೂಡ ನಾಯಕನಾಗಿ ತಂಡಕ್ಕೆ ಯಶ ತಂದುಕೊಟ್ಟಿದ್ದರು ಎಂಬುದು ಕಿರಣ್ ಮೋರೆಯವರ ಅಭಿಮತವಾಗಿದೆ.
ಇನ್ನು ದ್ರಾವಿಡ್ ಮತ್ತು ಗ್ರೆಗ್ ಚಾಪೆಲ್ ಸಮಯದಲ್ಲಿ ಟೀಮ್ ಇಂಡಿಯಾಗೆ ಯಾವ ರೀತಿಯ ಪ್ರಭಾವ ಬೀರಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಕಿರಣ್ ಮೋರೆ, ನೀವು 2011ರ ವಿಶ್ವಕಪ್ ಟೂರ್ನಿಯ ವಿಜೇತ ತಂಡವನ್ನು ನೋಡಿ.. ಆ ತಂಡದಲ್ಲಿ ಸುರೇಶ್ ರೈನಾ, ಧೋನಿ, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಯುಸೂಫ್ ಪಠಾಣ್, ಶ್ರೀಶಾಂತ್, ಮುನಾಫ್ ಪಟೇಲ್‍ನಂತಹ ಆಟಗಾರರು ದ್ರಾವಿಡ್ ನಾಯಕತ್ವದಲ್ಲಿ ಆಡಿದ್ದರು. ಚಾಪೆಲ್ ಅವರಿಗೆ ಪ್ರೋತ್ಸಾಹವನ್ನು ನೀಡಿದ್ದರು. ಹಾಗೇ ಆಯ್ಕೆಗಾರರಾಗಿ ನಾವು ಬೆಂಬಲ ನೀಡಿದ್ದೇವು. ಹಿರಿಯ ಆಟಗಾರರಾದ ಸಚಿನ್, ಕುಂಬ್ಳೆ, ದ್ರಾವಿಡ್, ಜಹೀರ್‍ಖಾನ್ ಅವರು ಉತ್ತಮ ಸಾಧನೆ ಮಾಡಿದ್ದರು ಎಂದು ಮೋರೆ ಟೀಕೆ ಮಾಡಿದವರಿಗೆ ಪರೋಕ್ಷೆವಾಗಿ ಟಾಂಗ್ ನೀಡಿದ್ದಾರೆ.
ವಿಶ್ವ ಕಪ್ ಗೆಲ್ಲುವುದು ಅಂದ್ರೆ ಸುಲಭದ ಮಾತಲ್ಲ. ಅಲ್ಲಿ ಸಾಕಷ್ಟು ವರ್ಷಗಳ ಪರಿಶ್ರಮವಿರುತ್ತೆ. ಜಾನ್ ರೈಟ್, ಗ್ರೆಗ್ ಚಾಪೆಲ್ ಹಾಕಿಕೊಟ್ಟ ಅಡಿಪಾಯದಲ್ಲಿ ಗ್ಯಾರಿಕಸ್ಟರ್ನ್ ತಂಡಕ್ಕೆ ಅದನ್ನು ಮುಂದುವರಿಸಿದರು. ಹೀಗಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು ಎಂಬುದು ಕಿರಣ್ ಮೋರೆಯವರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಕಿರಣ್ ಮೋರೆ ಅವರು ವಿಶ್ವಕಪ್ ಗೆಲುವಿನ ಬಗ್ಗೆ, ಗಂಗೂಲಿ ನಾಯಕತ್ವದಿಂದ ಕೈಬಿಟ್ಟಿರುವುದು, ದ್ರಾವಿಡ್ ನಾಯಕತ್ವ, ಮಹೇಂದ್ರ ಸಿಂಗ್ ಧೋನಿಯ ಆಯ್ಕೆ ಬಗ್ಗೆ ಹಲವು ಮಂದಿ ಕ್ರೆಡಿಡ್ ತೆಗೆದುಕೊಂಡಿದ್ದರು. ಇದಕ್ಕೆಲ್ಲಾ ಈಗ ಕಿರಣ್ ಮೋರೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

Related posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

May 8, 2026
ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

May 8, 2026

.

Tags: Anil KumbleGoutham GambhirGreg Chappellkiran moreM.S Dhonimunaf patelRahul DravidSachin TendulkarSourav Gangulysuresh rainteam indiavirat kohlizaheer khan
ShareTweetSendShare
Join us on:

Related Posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

by Shwetha
May 8, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಭೀಕರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಪ್ತ...

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

by Shwetha
May 8, 2026
0

ಬೆಂಗಳೂರು ಪಶ್ಚಿಮ ಬಂಗಾಳದ ರಾಜಕೀಯ ರಣಕಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಬೆಂಗಳೂರು...

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕುರಿತು...

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

by Shwetha
May 8, 2026
0

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು...

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

by Shwetha
May 8, 2026
0

ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram