ಸಕ್ರಿಯ ಕೊರೊನಾ ಪ್ರಕರಣಗಳಲ್ಲಿ ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ
ಬೆಂಗಳೂರು, ಜುಲೈ 25: 55,388 ಕ್ರಿಯಾಶೀಲ ಕೋವಿಡ್ -19 ಪ್ರಕರಣಗಳೊಂದಿಗೆ ಕರ್ನಾಟಕವು ಸಕ್ರಿಯ ಕೊರೊನಾವೈರಸ್ ಎಣಿಕೆಯ ಸಂಖ್ಯೆಯಲ್ಲಿ ತಮಿಳುನಾಡನ್ನು ಹಿಂದಿಕ್ಕಿದೆ. ತಮಿಳುನಾಡಿನಲ್ಲಿ ಪ್ರಸ್ತುತ 52,273 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಸತತ ಮೂರನೇ ದಿನವೂ 5,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ
ಇಂದು ರಾಜ್ಯದಲ್ಲಿ 5,072 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಒಟ್ಟು 90,942 ಸಂಚಿತ ಪ್ರಕರಣಗಳಲ್ಲಿ 33,750 ಪ್ರಕರಣಗಳು ಗುಣಮುಖರಾಗಿ ಮನೆಗೆ ಮರಳಿದ್ದರೆ ಮತ್ತು 1,796 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಶನಿವಾರ ಮೃತಪಟ್ಟ 72 ಜನರಲ್ಲಿ ಜೂನ್ 20 ರಿಂದ ವೈರಸ್ ವಿರುದ್ಧ ಹೋರಾಡುತ್ತಿದ್ದ 105 ವರ್ಷದ ವ್ಯಕ್ತಿಯೂ ಸೇರಿದ್ದಾರೆ.
ಏತನ್ಮಧ್ಯೆ, ಬೆಂಗಳೂರಿನಲ್ಲಿರುವ ಎಲ್ಲಾ ಕೋವಿಡ್ -19 ಸಂಬಂಧಿತ ಮೃತ ದೇಹಗಳನ್ನು ಉಚಿತವಾಗಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ ಘೋಷಿಸಿದ್ದಾರೆ.








