ರಾಯಚೂರು: ಕೊರೊನಾ ಮಹಾಮಾರಿ ಬಡವರು ಶ್ರೀಮಂತರು, ಸಾಮಾನ್ಯ ಜನರು ಸೆಲೆಬ್ರಿಟಿಗಳು, ಜನಪ್ರತಿನಿಧಿಗಳು ಹೀಗೆ ಯಾರನ್ನು ಬಿಟ್ಟಿಲ್ಲ. ಇದೀಗ ಈ ಮಹಾಮಾರಿಯಿಂದÉ ರಾಯಚೂರಿನ ರೌಡಕುಂದ ಗ್ರಾಮ ಸಂಸ್ಥಾನದ ಹಿರೇಮಠದ (44) ಮರಿಸಿದ್ದಲಿಂಗ ಸ್ವಮೀಜಿಗಳು ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸ್ವಾಮೀಜಿಗಳು ಬಳ್ಲಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಗಳಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದ್ದು, ಚಿಕಿತ್ಸೆ ಫಲಕಾರೆಯಾಗದೆ ವಿಧಿವಶರಾಗಿದ್ದಾರೆ. ಇನ್ನೂ ರೌಡಕುಂದ ಮಠದ ಆವರಣದಲ್ಲಿ ಕೊರೊನಾ ನಿಯಮಾನುಸಾರ ಶ್ರೀಗಳ ಅಂತ್ಯಕ್ರಿಯೆ ನೆರವೇರಿದೆ. ರಾಯಚೂರು, ಬಳ್ಳಾರಿ ಸೇರಿ ನೆರೆಯ ಆಂದ್ರದಲ್ಲಿ ಸಾವಿರಾರು ಭಕ್ತರನ್ನು ಹೊಂದಿರುವ ಶ್ರೀಗಳು ವೀರಶೈವ ಸಮಾಜ ಮತ್ತು ಪರಂಪರೆಯನ್ನು ಉಳಿಸಲು ಸಾಕಷ್ಟು ಶ್ರಮಿಸಿದ್ದಾರೆ.
Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ
ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...








