ಬೆಂಗಳೂರು : ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ಟುದಿನ ತಲೆಮರೆಸಿಕೊಂಡಿದ್ದ ಸುಶ್ಮಿತಾ ಪತಿ ಶರತ್, ಆತನ ದೊಡ್ಡಮ್ಮ ವೈದೇಹಿ ಹಾಗೂ ಸಹೋದರಿ ಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಸುಶ್ಮಿತಾ ಕಳೆದ ಕೆಲ ದಿನಗಳ ಹಿಂದೆ ಮಾಳಗಾಳದಲ್ಲಿರುವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಪತಿ ಶರತ್, ಆತನ ದೊಡ್ಡಮ್ಮ ವೈದೇಹಿ ಹಾಗೂ ಆತನ ಸಹೋದರಿ ಗೀತಾ ಕಾರಣ. ಅವರ ಕಿರುಕುಳದಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಳು. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಲ್ಲಿಕಾರ್ಜುನ ಖರ್ಗೆಗೆ ಚಲವಾದಿ ನೇರ ಪ್ರಶ್ನೆ!
ಬ್ರಾಹ್ಮಣರ ಕುರಿತು ನೀಡಿದ ಹೇಳಿಕೆಗಳ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ಬ್ರಾಹ್ಮಣರ ಬಗ್ಗೆ ಇಷ್ಟು ಮಾತಾಡ್ತೀರಾ,...








