ತಮಿಳುನಾಡಿನ ನಾಮಕ್ಕಲ್ ವಿದ್ಯಾರ್ಥಿನಿ ಕಾನಿಕಾ ಜೊತೆ ನಮೋ ಮನ್ ಕಿ ಬಾತ್..!
ಹೊಸದಿಲ್ಲಿ, ಜುಲೈ 27: ಭಾರತದ ಪ್ರಧಾನ ಮಂತ್ರಿಯಿಂದ ಒಬ್ಬರಿಗೆ ಕರೆ ಬಂದರೆ ಖಂಡಿತವಾಗಿಯೂ ಅವರು ಅಸಾಧ್ಯವಾದದ್ದನ್ನು ಸಾಧಿಸಿದ್ದಾರೆ ಎಂದೇ ಅರ್ಥ. ಅನೇಕರಿಗೆ, ಅದು ಒಂದು ಕನಸು ಮತ್ತು ನಾಮಕ್ಕಲ್ ಎಂಬ ಸಣ್ಣ ಜಿಲ್ಲೆಗೆ ಅದು ಒಂದು ಸಾಧನೆಯಾಗಿದೆ. ಪ್ರಧಾನಿ ಮೋದಿಯವರ ಭಾನುವಾರದ ಮನ್ ಕಿ ಬಾತ್ ಅಧಿವೇಶನದಲ್ಲಿ ನಾಮಕ್ಕಲ್ ನ ಕಾನಿಕಾ ಎಂಬ ಹುಡುಗಿ ಪ್ರಧಾನಿ ಮೋದಿಯವರೊಂದಿಗೆ ಮಾತನಾಡುವ ಅವಕಾಶವನ್ನು ಪಡೆದಳು.
ತನ್ನ ಮಂಡಳಿಯ ಪರೀಕ್ಷೆಯಲ್ಲಿ 490 ಅಂಕಗಳನ್ನು ಗಳಿಸಿದ್ದರಿಂದ ಕಾನಿಕಾ ಅವರಿಗೆ ಪ್ರಧಾನ ಮಂತ್ರಿಯಿಂದ ಕರೆ ಬಂತು.
ತಮಿಳುನಾಡಿನ ನಾಮಕ್ಕಲ್‌ನ ಎನ್.ಎನ್.ಕಾನಿಕಾ ಹೆವಿವೇಯ್ಟ್ ವಾಹನ ಚಾಲಕ ಎಸ್ ಕೆ ನಟರಾಜನ್ ಅವರ ಪುತ್ರಿ.
ಅಂಜನೇಯರ್ ದೇವಸ್ಥಾನಕ್ಕೆ ಪ್ರಸಿದ್ಧವಾದ ತಿರುಚ್ಚಿ ಬಳಿ ನಮಕ್ಕಲ್ ಇದೆ . ತನ್ನ ಬೋರ್ಡ್ ಪರೀಕ್ಷೆಯಲ್ಲಿ ಕಾನಿಕಾ 500 ರಲ್ಲಿ 490 ಅಂಕಗಳನ್ನು ಗಳಿಸಿದ್ದಾರೆ.

ಮನ್ ಕಿ ಬಾತ್ ನ 67ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 98% ಪಡೆದ ಹುಡುಗಿಗೆ ಕರೆ ಮಾಡಿದರು. ನಾವು ನೇರವಾಗಿ ದಕ್ಷಿಣದ ತಮಿಳುನಾಡಿಗೆ ಹೋಗೋಣ,
ನಾಮಕ್ಕಲ್ ನ ಮಗಳು ಕಾನಿಕಾ ಮತ್ತು ಅವರ ಕಥೆ ತುಂಬಾ ಸ್ಪೂರ್ತಿದಾಯಕವಾಗಿದೆ. ಅವರೊಡನೆ ಮಾತನಾಡೋಣ
ಎಂದು ಪ್ರಧಾನಿ ಮೋದಿ ಕಾನಿಕಾರನ್ನು ದೇಶವಾಸಿಗಳಿಗೆ ಪರಿಚಯಿಸಿದರು.
ಅವರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ್ದಕ್ಕಾಗಿ ಕಾನಿಕಾರನ್ನು ಅಭಿನಂದಿಸಿದರು. ನಂತರ ಕಾನಿಕಾಗೆ, ನಾನು ನಮಕ್ಕಲ್ ಬಗ್ಗೆ ಯೋಚಿಸುವಾಗ, ಅಂಜನೇಯರ್ ದೇವಾಲಯದ ಬಗ್ಗೆ ಯೋಚಿಸುತ್ತೇನೆ. ಇನ್ನು ಮುಂದೆ ನಿಮ್ಮೊಂದಿಗಿನ ನನ್ನ ಸಂವಹನವನ್ನು ಸಹ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದರು. ಪರೀಕ್ಷೆಗಳಿಗೆ ಅವರ ತಯಾರಿ ಹೇಗೆ ನಡೆಯಿತು ಎಂದು ಪ್ರಧಾನಿ ಕೇಳಿದಾಗ ಕಾನಿಕಾ “ಸರ್, ನಾನು ಮೊದಲಿನಿಂದಲೂ ತುಂಬಾ ಶ್ರಮಿಸುತ್ತಿದ್ದೆ, ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ ಆದರೆ ನಾನು ಚೆನ್ನಾಗಿ ಬರೆದಿದ್ದೆ. ಹಾಗಾಗಿ ಉತ್ತಮ ಫಲಿತಾಂಶವನ್ನು ಪಡೆಯುತ್ತೇನೆ ಎಂದು ಭರವಸೆ ಇತ್ತು” ಎಂದು ವಿನಮ್ರವಾಗಿ ಉತ್ತರಿಸಿದರು.

ಅವರು ಎಷ್ಟು ಅಂಕಗಳನ್ನು ನಿರೀಕ್ಷಿಸಿದ್ದರು ಎಂದು ಪ್ರಧಾನಿ ಕೇಳಿದಾಗ, “ನಾನು ಯೋಚಿಸಿದ್ದೆ 485 ಅಥವಾ 486 … ಆದರೆ, ಎಲ್ಲಾ ನಿರೀಕ್ಷೆಗಳನ್ನು ಮೀರಿ 490 ಅನ್ನು ಪಡೆದೆ ಎಂದು ಹೇಳಿದ ಕಾನಿಕಾ, ತನ್ನ ಹೆತ್ತವರ ಮತ್ತು ಶಿಕ್ಷಕರ ಪ್ರತಿಕ್ರಿಯೆಯನ್ನು ಸಹ ವಿವರಿಸಿದರು, “ಅವರು ತುಂಬಾ ಸಂತೋಷ ಮತ್ತು ಹೆಮ್ಮೆಪಟ್ಟರು, ಸರ್… ಗಣಿತ ನನ್ನ ನೆಚ್ಚಿನ ವಿಷಯ ಮತ್ತು ಸಾಧ್ಯವಾದರೆ ನಾನು ವೈದ್ಯೆಯಾಗುತ್ತೇನೆ, ಸರ್” ಎಂದು ಅವಳು ಪ್ರಧಾನಿಗೆ ತಿಳಿಸಿದರು.
ತನ್ನ ತಂದೆ ಡ್ರೈವರ್ ಎಂದ ಅವರು, ತನ್ನ ಸಹೋದರಿ ಎಂಬಿಬಿಎಸ್ ಪದವಿಯನ್ನು ಕಲಿಯುತ್ತಿದ್ದಾರೆ ಎಂದು ತಿಳಿಸಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕಾನಿಕಾ ತಂದೆಯ ಸಮರ್ಪಣೆಯಿಂದ ತುಂಬಾ ಪ್ರಭಾವಿತರಾದ ಪ್ರಧಾನಿ ಮೋದಿ, ಮೊದಲನೆಯದಾಗಿ, ನಿಮ್ಮ ಸಹೋದರಿ ಮತ್ತು ನಿಮ್ಮ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿರುವ ನಿಮ್ಮ ತಂದೆಗೆ ನನ್ನ ನಮಸ್ಕಾರವನ್ನು ಅರ್ಪಿಸುತ್ತೇನೆ. ಇದು ಅವರು ಮಾಡುತ್ತಿರುವ ದೊಡ್ಡ ಸೇವೆಯಾಗಿದೆ ಮತ್ತು ಅವರು ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.








