ಬೆಂಗಳೂರು: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಇದೀಗ ಕನ್ನಡಿಗರ ನಿದ್ದೆಗೆಡಿಸಿದೆ. ಜನರು ಕೊರೊನಾಗೆ ಹೆದರಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಸುರಿಮಳೆಗೈದಿದ್ದಾರೆ. ಸಾರ್.. ನಂಗೆ ಎರಡು ದಿನದಿಂದ ಶೀತ, ಜ್ವರ, ಕೆಮ್ಮು. ನನಗೆ ಕೊರೊನಾ ಇದೆಯಾ?. ಇದೆಲ್ಲ ಕೊರೊನಾ ವೈರಸ್ ಲಕ್ಷಣಗಳಾ ಎಂದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಮೇಲೆ ಕರೆಗಳು ಬರುತ್ತಿವೆ. ಸಹಾಯವಾಣಿಗೆ ಇದೂವರೆಗೆ ಆರೂವರೆ ಸಾವಿರ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕೇವಲ 3-4 ತಿಂಗಳಲ್ಲಿ ಇಷ್ಟೊಂದು ಕರೆ ಬಂದಿದ್ದು, 104 ಸಹಾಯವಾಣಿಯ ಸಿಬ್ಬಂದಿಗೆ ಈಗ ಕೊರೊನಾ ಬಗ್ಗೆ ಮಾಹಿತಿ ಕೊಡೋದೆ ಕೆಲಸವಾಗಿದೆ.
ಕ್ರಿಕೆಟ್ ದಿಗ್ಗಜ ಯುವಿ ಗೆ ಭಜ್ಜಿಯಿಂದ ವಿಶೇಷ ಜನ್ಮದಿನದ ಶುಭಾಶಯ!
ಭಾರತದ ಕ್ರಿಕೆಟ್ ದಿಗ್ಗಜ ಯುವರಾಜ್ ಸಿಂಗ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಕ್ರಿಕೆಟ್ ಲೋಕದ ಗಣ್ಯರು, ಮತ್ತು ಸಹ ಆಟಗಾರರು ಶುಭಾಶಯ ಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರ ಸ್ನೇಹಿತ...