11 ವರ್ಷಗಳಿಂದ ಬಾಲಿವುಡ್‍ನಲ್ಲಿರುವ ಜಾಕ್ಲಿನ್ ಫರ್ನಾಂಡಿಸ್ ಅವರು ಬಾಲಿವುಡ್ ಸಿನಿ ಜಗತ್ತನ್ನು ಒಂದು ಸುಂದರವಾದ ಮೋಸ ಎಂದು ಕರೆದಿದ್ದಾರೆ. ಜಾಕ್ಲಿನ್ ಫರ್ನಾಂಡಿಸ್ ಅವರ ಈ ಹೇಳಿಕೆ ಇದೀಗ ಬಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಬಾಲಿವುಡ್ ಚಿತ್ರರಂಗದ ಒಳನೋಟದ ಬಗ್ಗೆ ಮನದಾಳದ ಮಾತು ಹಂಚಿಕೊಂಡಿರುವ ಜಾಕ್ಲಿನ್ ಬಾಲಿವುಡ್ ಎಂಬುದು ಸುಂದರ ಮೋಸ. ಇಲ್ಲಿನ ನಟನಟಿಯರು ಮಾಡುತ್ತಿರುವುದೆಲ್ಲಾ ಪ್ರದರ್ಶನ ಅಷ್ಟೇ. ಇಲ್ಲಿ ನಟ- ನಟಿಯರು ನಟಿಸುತ್ತಿದ್ದಾರೆ ಅಷ್ಟೇ, ಅದೆಲ್ಲವೂ ನಿಜವಲ್ಲ ಎಂದಿದ್ದಾರೆ.
ಬಾಲಿವುಡ್ ನಲ್ಲಿ ನೆಪೋಟಿಸಮ್, ಸ್ವಜನಪಕ್ಷಪಾತ ಬಗ್ಗೆ ನಯವಾಗಿಯೇ ಮಾತನಾಡಿರುವ ಜಾಕ್ಲಿನ್ ಇದರಿಂದ ನನಗೆ ಹೆಚ್ಚೇನು ಸಮಸ್ಯೆಯಾಗಿಲ್ಲ. ನಾನಂದುಕೊಂಡತಹ ಸಿನೆಮಾಗಳು ಸಿಗದೇ ಹೋದರು, ಆಫರ್ ಗಳು ಸಿಗುವುದು ನಿಂತಿಲ್ಲ. ಆದ್ರೆ ಬಾಲಿವುಡ್ ನಲ್ಲಿ ಎಲ್ಲರೂ ಸುಳ್ಳೇ, ಎಲ್ಲರದ್ದೂ ನಾಟಕವೇ, ನಟನಟಿಯರು ಮಾಡುತ್ತಿರುವುದೆಲ್ಲಾ ನಿಜವಲ್ಲ. ಬಾಲಿವುಡ್ ನಲ್ಲಿ ಪಾರದರ್ಶಕ ಕಾಸ್ಟಿಂಗ್ ವ್ಯವಸ್ಥೆಯೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ವೋಟ್ ಬ್ಯಾಂಕ್ ಗಾಗಿ ದೇಶದ್ರೋಹಿಗಳಿಗೆ ಕಾಂಗ್ರೆಸ್ ರಕ್ಷಣೆ ಎಂದು ಛಲವಾದಿ ಆಕ್ರೋಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಈಗ ತಾರಕಕ್ಕೇರಿದ್ದು, ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಗಂಭೀರ ಆರೋಪಗಳ ಸುರಿಮಳೆಯೇ ನಡೆಯುತ್ತಿದೆ. ಕೆಪಿಸಿಸಿ...








