ಕನ್ನಡ ಹಾಗೂ ತಮಿಳಿನ ಅನೇಕ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ವಿಜಯಲಕ್ಷ್ಮೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನೂ ವಿಡಿಯೋದಲ್ಲಿ ನನ್ನ ಸಾವಿಗೆ ಸೀಮನ್ ಹಾಗೂ ಹರಿಂದರನ್ ಅವರೇ ಕಾರಣ ಎಂದು ವಿಜಲಕ್ಷ್ಮೀ ಹೇಳಿಕೊಂಡಿದ್ದು ಇದೀಗ ಬಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡದಲ್ಲಿ ಮಾತನಾಡಿರುವ ವಿಜಯಲಕ್ಷ್ಮೀ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಸೀಮನ್ ಮತ್ತು ಹರಿಂದ್ರನ್ ನನಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆ. ನಾನು ಸಾಕಷ್ಟು ತಡೆದುಕೊಂಡಿದ್ದೇನೆ. ಇನ್ನೂ ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ನಾನು ಬದುಕಿದ್ದಿದ್ದದ್ದೇ ನನ್ನ ತಾಯಿ ಹಾಗೂ ಅಕ್ಕನಿಗಾಗಿ. ಆದರೆ ನನಗೆ ಸಾಕಾಗಿದೆ. ಸೀಮನ್ ಮತ್ತು ಹರಿಂದ್ರನ್ ನನ್ನು ಬಿಡಬೇಡಿ. ಅವರನ್ನು ಶಿಕ್ಷಿಸಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಇನ್ನೂ ವಿಡಿಯೋದಲ್ಲಿ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ ವಿಜಯಲಕ್ಷ್ಮೀ ಅದ್ರಲ್ಲಿ ಪ್ರಮುಖವಾಗಿ, ” ನಾನು ಪಿಲ್ಲೈ ಸಮುದಾಯದವಳು. ಅವರು ನನ್ನ ಜಾತಿಯನ್ನು ಅವಮಾನಿಸುತ್ತಿದ್ದಾರೆ. ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ ಎಂದು ಸುಳ್ಲು ಆರೋಪ ಹೊರಿಸಿದ್ದಾರೆ. ಈಗಾಗಲೇ ನಾನು 2 ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದು, ಇನ್ನೆರೆಡು ಗಂಟೆಗಳಲ್ಲಿ ನನಗೆ ಬಿಪಿ ಲೋ ಆಗುತ್ತೆ. ಇನ್ನೆರೆಡು ಗಮಟೆಗಳಲ್ಲಿ ನಾನು ಸಾಯಲಿದ್ದೇನೆ ಎಂದು ಹೇಳಿಕೊಂಡು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ ಆಗ್ತಿದ್ದು, ಹಲವಾರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. 
ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು
ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ...








