ಇಟಲಿ ಎ ಸೀರಿಸ್ ಟ್ರೋಫಿಯನ್ನು ಅಭಿಮಾನಿಗಳಿಗೆ ಅರ್ಪಿಸಿದ ಕ್ರಿಸ್ಟಿಯಾನೊ ರೋನಾಲ್ಡೊ
2019-20ನೇ ಸಾಲಿನ ಸಿರೀಸ್ ಎ ಪ್ರಶಸ್ತಿಯನ್ನು ಜುವೆಂಟರ್ಸ್ ತಂಡ ಗೆದ್ದುಕೊಂಡಿದೆ. ಈ ಪ್ರಶಸ್ತಿಯ ಮೂಲಕ ಜುವೆಂಟರ್ಸ್ ಸತತ ಎರಡನೇ ಬಾರಿ ಹಾಗೂ ಒಟ್ಟು ಪ್ರಶಸ್ತಿಗಳ ಸಂಖ್ಯೆಯನ್ನು 9ಕ್ಕೇರಿಸಿಕೊಂಡಿದೆ. ನಿನ್ನೆ ನಡೆದ ಲೀಗ್‍ನ 36ನೇ ಪಂದ್ಯದಲ್ಲಿ ಜುವೆಂಟರ್ಸ್ 2-0 ಗೋಲುಗಳಿಂದ ಸ್ಯಾಮ್‍ಡೋರಿಯಾ ತಂಡವನ್ನು ಪರಾಭವಗೊಳಿಸಿತು.
ಜುವೆಂಟರ್ಸ್ ತಂಡದ ಹೀರೋ ಕ್ರಿಸ್ಟಿಯಾನೊ ರೋನಾಲ್ಡ್ ಆಡಿರುವ 32 ಪಂದ್ಯಗಳಲ್ಲಿ 31 ಗೋಲು ದಾಖಲಿಸಿದ್ದಾರೆ. ಡನ್… ಚಾಂಪಿಯನ್ಸ್ ಆಫ್ ಇಟಲಿ.. ಸತತ ಎರಡನೇ ಬಾರಿ ಗೆದ್ದಿರುವುದು ಖುಷಿಯನ್ನುಂಟು ಮಾಡಿದೆ. ಜುವೆಂಟರ್ಸ್ ಫುಟ್ ಬಾಲ್ ಕ್ಲಬ್ ತನ್ನ ಪಾರುಪತ್ಯವನ್ನು ಮುಂದುವರಿಸಿದೆ ಎಂದು ಕ್ರಿಸ್ಟಿಯಾನೋ ರೋನಾಲ್ಡ್ ಹೇಳಿಕೊಂಡಿದ್ದಾರೆ.
ಈ ಪ್ರಶಸ್ತಿಯನ್ನು ಜುವೆಂಟರ್ಸ್ ಕ್ಲಬ್ ನ ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇವೆ. ಅದ್ರಲ್ಲೂ ಯಾರೆಲ್ಲಾ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೋ,, ಚೇತರಿಸಿಕೊಳ್ಳುತ್ತಿದ್ದಾರೋ ಅವರಿಗೆ ಈ ಪ್ರಶರ್ಸಿಯನ್ನು ಅರ್ಪಣೆ ಮಾಡುತ್ತಿದ್ದೇವೆ ಎಂದು ರೋನಾಲ್ಡೊ ಹೇಳಿದ್ದಾರೆ.
ಈ ಗೆಲುವಿನ ಮೂಲಕ ಜುವೆಂಟರ್ಸ್ ತಂಡ ಒಟ್ಟು 83 ಅಂಕಗಳನ್ನು ಪಡೆದುಕೊಂಡಿದೆ. ಇಂಟರ್ ಮಿಲನ್ ಎರಡನೇ ಸ್ಥಾನದಲ್ಲಿದೆ. ಒಟ್ಟಾರೆ ಏಳು ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದು, ಜುಲೈ 30ರಂದು ಜುವೆಂಟರ್ಸ್ ತಂಡ ಕಾಗ್ಲಿಯಾರಿ ತಂಡವನ್ನು ಎದುರಿಸಲಿದೆ.








