ಕಲಬುರಗಿ: ಜನರ ರಕ್ಷಣೆ ಮಾಡುವವರು ಪೊಲೀಸರು. ಪೊಲಿಸರು ಸಾರ್ವಜನಿಕರ ಜೊತೆಗೆ ಸ್ನೇಹಿತರಂತೆ ಇರಬೇಕು. ಕೆಲವರ ವರ್ತನೆ ಇದಕ್ಕೆ ಕನ್ನಡಿ ಹಿಡಿದಂತೆ ಇರುತ್ತೆ. ಆದ್ರೆ ಇನ್ನೂ ಕೆಲ ಪೊಲೀಸ್ ಸಿಬ್ಬಂದಿಗಳ ವರ್ತನೆ ಇದಕ್ಕೆ ತದ್ವಿರುದ್ಧವಾಗಿರುತ್ತೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ತೋರಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಹೊರವಯದ ಪರತಬಾ ಠಾಣೆಯ ಪೊಲೀಸ್ ಸಿಬ್ಬಂದಿ ವಿಜಯಕುಮಾರ ಎಂಬುವವರು ಕುಡಿದು ವಾಹನ ಚಲಾಯಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ನಬಂದಂತೆ ಥಳಿಸಿದ್ದು, ಥಳಿತಕ್ಕೊಳಗಾದ ಯುವಕ ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೇವರ್ಗಿ ತಾಲೂಕಿನ ಇಜೇರಿ ಅಲ್ಲಾಭಕ್ಷ ಥಳಿತಕ್ಕೊಳಗಾದ ಎನ್ನಲಾಗಿದೆ. ಇನ್ನೂ ದರ್ಪ ಮೆರೆದ ಪೊಲಿಸ್ ಸಿಬ್ಬಮದಿ ವಿರುದ್ಧ ಸಾವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಥಳಿತಕ್ಕೊಳಗಾದ ಸಂತ್ರಸ್ತ ಆಗ್ರಹಿಸಿದ್ದಾನೆ.









