ಸ್ವಚ್ಛ ಸ್ಮಾರಕ – ಸುಂದರ ಭಾರತ ಎಂಬ ಕನಸು ಹೊತ್ತ ಲಿಂಗಸೂಗೂರು, ಮುದಗಲ್ ಯುವ ಬ್ರಿಗೇಡ್ ವಿಭಾಗದ ವತಿಯಿಂದ ಇಂದು ಮುದಗಲ್ ಕೋಟೆಯ ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಗಿಲ್_ವಿಜಯೋತ್ಸವದ ವೀರರನ್ನು ಸ್ಮರಿಸುವುದರ ಜೊತೆಗೆ ನಮ್ಮ ಹೆಮ್ಮೆಯ ಪ್ರತೀಕ ಬಿಲ್ಲಮರಾಯ ಕಟ್ಟಿಸಿದ ಕೋಟೆ, ಹಕ್ಕ-ಬುಕ್ಕ-ಶ್ರೀಕೃಷ್ಣದೇವರಾಯರು ಆಳಿದ ಮುದಗಲ್ ಕೋಟೆಯನ್ನು ರಕ್ಷಿಸಲು ಹಾಗೂ ಇತಿಹಾಸದ ಪುಟಗಳಲ್ಲಿ ಸ್ಥಾನಗಳಿಸಿದ ಎಷ್ಟೋ ಸ್ಮಾರಕಗಳು ಸೂಕ್ತ ನಿರ್ವಹಣೆಯಿಲ್ಲದೇ ಸೊರಗಿಹೋಗಿದ್ದನ್ನು ಕಂಡ ಯುವಾ ಬ್ರಿಗೇಡ್ ಕಾರ್ಯಕರ್ತರು ಮತ್ತು ಮುದಗಲ್ಲ ಯುವ ಬ್ರಿಗೇಡ್ ಯುವಕರು ಪಣತೊಟ್ಟಿದ್ದು, ತಮ್ಮ ಕೈಲಾದ ಪ್ರಯತ್ನ ನಡೆಸಿ ಸ್ವಚ್ಚತಾ ಕಾರ್ಯನಡೆಸಿದರು. ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿ ಸಿದರು.
ಕೋಟೆಯ ಸ್ಮಾರಕ ಸ್ವಚ್ಛಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೇವಾ ಕಾರ್ಯದಲ್ಲಿ ಭಾಗವಹಿಸುವವರು ಎಲ್ಲರೂ ಮಾಸ್ಕ್ ಧರಿಸಿ ಸ್ವಚ್ಚತಾ ಕಾಯಾ9ಕ್ರಮದಲ್ಲಿ ಭಾಗವಸಿದ್ದರು. ಈ ಸಂದರ್ಭದಲ್ಲಿ ಯುವ ಯುವ ಬ್ರಿಗೇಡ್ ವಿಭಾಗದ ಯುವಕರು ಮತ್ತು ಮತ್ತಿತರರು ಬಾಗಿಯಾಗಿದ್ದರು. 
‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ
ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...








