ಪ್ರತಿ ಬಾರಿ ಬಕ್ರೀದ್ ಹಬ್ಬದಲ್ಲಿ ಮೇಕೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದುಬಿಟ್ಟಿರುತ್ತೆ. ಗಲ್ಲಿಗಲ್ಲಿಗಳಲ್ಲೂ ಮೇಕೆಗಲನ್ನು ಕಡಿಯಲಾಗುತ್ತಿತ್ತು. ಆದ್ರೆ ಈ ಬಾರಿ ರಾಜ್ಯದ ಹಲವೆಡೆ ರಸ್ತೆಗಳಲ್ಲಿ, ದಾರ್ಮಿಕ ಕೇಂದ್ರಗಳ ಆವರಣ ಹಾಗೂ ಇತರೇ ನಿರ್ದಿಷ್ಠ ಸ್ಥಳಗಳಲ್ಲಿ ಅನಧಿಕೃತ ಪ್ರಾಣಿವಧೆಗೆ ಬ್ರೇಕ್ ಹಾಕಲಾಗಿದೆ. ಅದರಂತೆ ಸಕ್ಕರೆ ನಾಡು ಮಂಡ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಬರಲಿರುವ ಬಕ್ರಿದ್ ಹಬ್ಬಕ್ಕೆ ಪ್ರಾಣಿವಧೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಬಕ್ರಿದ್ ಹಬ್ಬದ ಆಚರಣೆ ವೇಳೆ ಜಿಲ್ಲೆಯಲ್ಲಿ ಗೋವುಗಳು, ಕರುಗಳು ಹಾಗೂ ಒಂಟೆಗಳ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಬಕ್ರಿದ್ ಹಬ್ಬದಲ್ಲಿ ಗೋವು/ಕರುಗಳು ಮತ್ತು ಒಂಟೆಗಳನ್ನು ಬಲಿ ಕೊಡುವುದು ಹಾಗೂ ಅನಧಿಕೃತವಾಗಿ ಸಾಗಾಣಿಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ ಆದೇಶ ಉಲ್ಲಂಘಿಸಿದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡು ಸದನದಲ್ಲಿ ಶೂಟೌಟ್ ಧಗಧಗ:ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!
ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣ ಇದೀಗ ಎರಡು ರಾಜ್ಯಗಳ ನಡುವೆ ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಸಂಚಲನ ಮೂಡಿಸಿದೆ. ಸ್ವಾತಂತ್ರ್ಯ...








