ದೆಹಲಿಯ ರಾಜೀವ್ ಚೌಕ್ ಮೆಟ್ರೊ ನಿಲ್ದಾಣದಲ್ಲಿ ಮಧ್ಯಾಹ್ನದ ಸುಮಾರು 12. 52ರ ವೇಳೆಗೆ 6 ಜನರಿದ್ದ ಯುವಕರ ಗುಂಪೊಂದು ದೇಶ್ ಕಿ ಗದ್ದಾರೊಂಕೊ, ಗೋಲಿ ಮಾರೊ(ದೇಶಕ್ಕೆ ಮೋಸ ಮಾಡಿದವರಿಗೆ ಗುಂಡು ಹೊಡೆಯಿರಿ) ಎಂದು ಘೋಷಣೆ ಕೂಗಲು ಆರಂಭಿಸಿದರು. ಇದನ್ನು ಗಮನಿಸಿದ ದೆಹಲಿ ಮೆಟ್ರೊ ಭದ್ರತಾ ಸಿಬ್ಬಂದಿ ಘೋಷಣೆ ಕೂಗುತ್ತಿದ್ದ ಯುವಕರ ಗುಂಪನ್ನು ವಶಕ್ಕೆ ಪಡೆದಿದ್ದು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರ ಗುಂಪು ಘೋಷಣೆ ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈರಲ್ ಆಗಿರುವ ವಿಡಿಯೋ ರಾಜೀವ್ ಚೌಕ್ ಮೆಟ್ರೊ ನಿಲ್ದಾಣದಲ್ಲಿ ನಡೆದ ಘಟನೆ ಎಂದು ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ ಸ್ಪಷ್ಟನೆ ನೀಡಿದೆ. ವಶಕ್ಕೆ ಪಡೆದಿರುವ 6 ಜನರ ಯುವಕರ ವಿಚಾರಣೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.
ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಭವಿಷ್ಯದ ಬಗ್ಗೆ ಈಗ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಬರಗಾಲದ ನೆಪವೊಡ್ಡಿ ಗ್ಯಾರಂಟಿ ಯೋಜನೆಗಳನ್ನು ಕೇವಲ ಬಡವರಿಗಷ್ಟೇ ಅಂದರೆ ಬಿಪಿಎಲ್...








