ಕಳೆದ ಸೋಮವಾರ ಫ್ರಾನ್ಸ್ ವಾಯನೆಲೆಯಿಂದ ಭಾರತಕ್ಕೆ ಸುಧೀರ್ಘ 7000 ಕಿಮೀ ಪಯಣ ಬೆಳೆಸಿದ್ದ ಮೊದಲ ಹಂತದ 5 ರಫೇಲ್ ವಿಮಾನಗಳು ಇಂದು ಮಧ್ಯಾಹ್ನದ ವೇಳೆಗೆ ಭಾರತತಲುಪಲಿದೆ. ಹರಿಯಾಣಾದ ಅಂಬಾಲ ವಾಯುನೆಲೆಗೆ ಬಂದು ರಫೇಲ್ ಫೈಟರ್ ಜೆಟ್‍ಗಳು ಲ್ಯಾಂಡ್ ಆಗಲಿದೆ. ಇನ್ನೂ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಅವರು ಹೆಮ್ಮೆಯ ರಫೇಲ್ ವಿಮಾನಗಳನ್ನು ಭಾರತಕ್ಕೆ ಬರಮಾಡಿಕೊಳ್ಳಲಿದ್ದಾರೆ. ಇನ್ನೂ ರಫೇಲ್ ವಿಮಾನಗಳ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದ್ದು, ಮೂಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ನಾಲ್ಕು ಹಳ್ಳಿಗಳಲ್ಲಿ ಸೆ.144 ಜಾರಿ ಮಾಡಲಾಗಿದ್ದು, ವಿಮಾನಗಳು ಬಂದಿಳಿಯುವ ದೃಷ್ಯ ಸೆರೆ ಹಿಡಿಯುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುತ್ತಮುತ್ತ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್ ಗಳನ್ನು ಹಾರಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ವಾಯುನೆಲೆ ಸುತ್ತಮುತ್ತ, ಧುಲ್ಕೊಟ್, ಬಲ್ದೇವ್ ನಗರ್, ಗರ್ನಾಲಾ ಮತ್ತು ಪಂಜ್ ಖೊರಾದಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಶೋಕ್ ಶರ್ಮ ತಿಳಿಸಿದ್ದಾರೆ.
ರಫೇಲ್4.5 ಜನರೇಷನ್‌ಯುದ್ಧ ವಿಮಾನ. ಚೀನಾ ಬಳಿ 5ನೇ ಜನರೇಷನ್‌ನ ಜೆ-20 ಯುದ್ಧ ವಿಮಾನಗಳಿವೆ. ಆದರೆ ಸಮರ ಸಾಮರ್ಥ್ಯದಲ್ಲಿ ರಫೇಲ್ ಸಾಕಷ್ಟು ಬಲಿಷ್ಠವಾಗಿದೆ. ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ವಿಮಾನದಲ್ಲಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಅವಳಿ ಸೀಟುಗಳಿರುತ್ತದೆ. ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಾಧುನಿಕ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಭಾರತ 2016ರಲ್ಲಿ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಫ್ರಾನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಹಂತದ 5 ವಿಮಾನಗಳು ಭಾರತಕ್ಕೆ ಆಗಮಸುತ್ತಿದ್ದು, ಭಾರತ ತಲುಪುವುದಕ್ಕೆ ಕ್ಷಣಗಣನೆ ಆರಂಬವಾಗಿದೆ. ಅತ್ಯಂತ ಬಲಶಾಲಿ ರಫೇಲ್ ಫೈಟರ್ ಜೆಟ್ ಗಳನ್ನು ಭಾರತೀಯರು ಅತ್ಯಂತ ಉತ್ಸುಕರಾಗಿ ಕಾಉತ್ತಿದ್ದಾರೆ. ಇನ್ನೂ ಲಡಾಕ್ ನಲ್ಲಿ ಕುತಂತ್ರಿ ಚೀನಾ ಸೇನೆ ಹಾಗೂ ಭಾರತೀಯ ಸೇನೆ ನಡುವಿನ ಸಂಘರ್ಷದ ಬಳಿಕ ರಫೇಲ್ ಭಾರತ ಪ್ರವೇಶಿಸುತ್ತಿರುವ ಭಾರತೀಯ ಸೇನಾಪಡೆಗೆ ಆನೆಬಲಬಂದಂತಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧದ ಇಡಿ ತನಿಖೆ ಅತಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಬೆಂಗಳೂರು ಮಟ್ಟದ...








