ವಿಜಯಪುರ : ಇಂದು ಮಹತ್ವಾಕಾಂಕ್ಷಿ ರಫೇಲ್ ಯುದ್ಧ ವಿಮಾನಗಳು ಭಾರತದ ನೆಲವನ್ನು ಸ್ಪರ್ಶಿಸಲಿವೆ. ಫ್ರಾನ್ಸ್ ನಿಂದ ಮೊದಲ ಹಂತವಾಗಿ 5 ರಾಫೇಲ್ ಯುದ್ಧ ವಿಮಾನಗಳು ಸೋಮವಾರ ಹೊರಟಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಹರ್ಯಾಣದ ಅಂಬಾಲದ ಅಲ್ ದಾಫ್ರಾ ವಾಯಪಡೆಗೆ ಸೇರ್ಪಡೆಗೊಳ್ಳಲಿವೆ.
ಈ ವಿಮಾನಕ್ಕೆ ವಿವಿಧ ಸೈನಿಕ ಶಾಲೆಯ ನಾಲ್ವರು ಕಮಾಂಡರ್ ಗಳು ಆಯ್ಕೆಯಾಗಿದ್ದು, ಇದರಲ್ಲಿ ವಿಜಯಪುರದ ಸೈನಿಕ ಶಾಲೆಯಲ್ಲಿ ಕಲಿತ ಕನ್ನಡಿಗ ಅರುಣ್ ಕುಮಾರ್ ಕೂಡಾ ಒಬ್ಬರಾಗಿದ್ದಾರೆ.
35 ವರ್ಷದ ಅರುಣ್ ಕುಮಾರ ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದರು. ಇವರು 1995 ರಿಂದ 2001ರ ಬ್ಯಾಚ್ ವಿದ್ಯಾರ್ಥಿಯಾಗಿದ್ದರು. ಅರುಣ್ ಕುಮಾರ ಜನವರಿ 2002ರಲ್ಲಿ ಎನ್ ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಎನ್ ಪ್ರಸಾದ ಸಹ ಏರ್ ಫೋರ್ಸ್ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.








