ಕಿಡ್ನಿ ಸ್ಟೋನ್ ಗೆ ರಾಮಬಾಣ ಸಾವಿಲ್ಲದ ಸಸ್ಯ ಕಾಡು ಬಸಳೆ ಸೊಪ್ಪು
ಕಾಡು ಬಸಳೆ ಸೊಪ್ಪಿನ ಮಹತ್ವ ತಿಳಿದರೆ ನೀವೂ ದಂಗಾಗ್ತೀರಿ. ತುಂಬಾ ಸುಲಭವಾಗಿ ನೀರಿದ್ದರೆ ಸಾಕು ಸಮೃದ್ಧವಾಗಿ ಬೆಳೆಯುವ ಈ ಸಸ್ಯ ಕಿಡ್ನಿ ಸ್ಟೋನ್ ಗೆ ರಾಮಬಾಣ. ಸ್ವಲ್ಪ ಹುಳಿ, ಒಗರು ರುಚಿ ಇರುವ ಇದರ ಎಲೆಗಳನ್ನು ಎರಡು ದಿನಕ್ಕೊಮ್ಮೆ 15 ದಿನಗಳ ಕಾಲ ಸೇವಿಸಿದರೆ ಎಷ್ಟು ದೊಡ್ಡ ಕಿಡ್ನಿಸ್ಟೋನ್ ಆದರೂ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ಅಲ್ಲದೇ ಇನ್ನೊಮ್ಮೆ ಕಿಡ್ನಿ ಸ್ಟೋನ್ ಬರದಂತೆ ಶಾಶ್ವತ ಪರಿಹಾರ ದೊರಕಿಸುವ ಶಕ್ತಿಯೂ ಈ ಕಾಡುಬಸಳೆಸೊಪ್ಪಿನ ಎಲೆಗಳಿಗಿವೆ. ಆದರೆ ಈ ಸೊಪ್ಪನ್ನು ಬಳಸುವಾಗ ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನೂ ಅಂದರೆ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪದಂತಹ ಯಾವುದೇ ಉತ್ಪನ್ನಗಳನ್ನೂ ಬಳಸುವಂತಿಲ್ಲ. ಎಳನೀರಿನ ಜೊತೆ ಸೇವಿಸಿದರೆ ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯವಾಗುತ್ತದೆ ಎನ್ನುತ್ತದೆ ನಾಟೀ ವೈದ್ಯ ಪದ್ಧತಿ.
ಇನ್ನು ಇದರ ಕಾಂಡ ಬಹಳ ಮೃದುವಾಗಿರುತ್ತದೆ. ಸ್ವಲ್ಪ ನೀರಿದ್ದರೂ ಸಾಕು ಚೆನ್ನಾಗಿ ಹರಡಿಕೊಂಡು ಬೆಳೆಯುತ್ತದೆ. ಇದರ ಚಟ್ನಿ, ಪಲ್ಯಗಳೂ ಸಹ ಬಹಳ ಆರೋಗ್ಯಕರ. ಅದರ ಎಲೆಗಳಿಗಿರುವ ಶಕ್ತಿಯೂ ಸಹ ಅಪಾರ. ಸಾವೇ ಇಲ್ಲದ ಸಸ್ಯ ಎಂದು ಇದನ್ನು ಕರೆಯುತ್ತಾರೆ. ಕಾಡುಬಸಳೆಯ ಎಲೆಗಳು ಎಷ್ಟು ವಿಸ್ತಾರವಾಗಿ ಜೀವಕೋಶಗಳನ್ನು ಹೊಂದಿರುತ್ತವೆಯೋ, ಅಷ್ಟೆ ಪ್ರಮಾಣದ ಗಿಡ ಬರೀ ಎಲೆಗಳಿಂದಲೇ ಹುಟ್ಟಿಕೊಳ್ಳುತ್ತವೆ. ಒಂದೇ ಒಂದು ಎಲೆಯಿಂದ 20 ರಿಂದ 30 ಸಸ್ಯಗಳಿಗೆ ಪುನರ್ಜೀವನ ನೀಡುತ್ತದೆ.
ಮಾಹಿತಿ ಮತ್ತು ಲೇಖನ :- ಅಂಬಿಕಾ ಸೀತೂರು