ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ, ನೆಪೋಟಿಸಮ್ ಆರೋಪಗಳು ಬಹಳ ಹಿಂದಿನಿಂದಲೇ ಇದ್ದರು , ಆ ಬಗೆಗಿನ ಚರ್ಚೆಗಳು ತಾರಕಕ್ಕೇರಿದ್ದು, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬಳಿಕ. ಹೌದು ಸುಶಾಂತ್ ಸಾವಿನ ಬಳಿಕ ನೆಪೋಟಿಸಮ್ , ಸ್ವಜನಪಕ್ಷಪಾತದ ಚರ್ಚೆಗಳು ವ್ಯಾಪಕವಾಗಿದ್ದು, ಆರೋಪಗಳನ್ನ ಮಾಡಿ ದೊಡ್ಡ ದೊಡ್ಡ ಮಂದಿಯತ್ತ ಬೊಟ್ಟು ಮಾಡಿ ತೋರಿಸಿದವರಲ್ಲಿ ಕಂಗನಾ ರಣಾವತ್ ಮುಂಚೂಣಿಯಲ್ಲಿದ್ದಾರೆ. ಇದಾದ ಬಳಿಕ ಒಬ್ಬೊಬ್ಬರಾಗಿಯೇ ನೆಪೋಟಿಸಮ್ ಬಗ್ಗೆ ಮಾತಾಡಿದ್ದು, ಕೆಲವರು ಒಪ್ಪಿಕೊಂಡಿದ್ದಾರೆ. ಇದೀಗ ಬಹುಭಾಷಾ ನಟ ಸೋನು ಸೂದ್ ಅವರು ಈ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಗೆ ಹೊರಗಿನಿಂದ ಬರುವಾಗ ಆತ್ಮಸ್ಥೈರ್ಯ ಮನೋಧೈರ್ಯ ಬಹಳವೇ ಮುಖ್ಯವಾಗಿರುತ್ತೆ. ನಾನು ಹೊರಗಿನಿಂದಲೇ ಬಾಲಿವುಡ್ ಗೆ ಬಂದಿದ್ದು, ದೊಡ್ಡ ದೊಡ್ಡ ಸ್ಟಾರ್ ಗಳಿರುವ ಜಾಗಗಳಿಗೆ ಹೋಗಿದ್ದೇನೆ. ಕೆಲವೊಮ್ಮೆ ನಾನು ಇಲ್ಲಿಯವನೇನಾ, ನಾನು ಇಲ್ಲಿಗೆ ಸೇರಿದವನೋ ಅನ್ನುವಂತಹ ಅನುಭವವಗಳು ಆಗಿವೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಸೋನು ಬಾಲಿವುಡ್ ಅನ್ನು ಪಾರ್ಟಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ‘ ಈ ಪಾರ್ಟಿಗೆ ಹೊರಗಿನಿಂದ ಬಂದ ಹೊಸಬರನ್ನು ಅಪ್ಪಿಕೊಂಡು ಖುಷಿಯಿಂದಲೇ ಬರಮಾಡಿಕೊಳ್ತಾರೆ. ನಾವು ಅವರಲ್ಲಿ ಒಬ್ಬರಂತೆ ಆಗ್ತಿವಿ ಅಂದುಕೊಂಡಿದ್ದರೆ ಹಾಗೇ ಯಾವುತ್ತೂ ಆಗುವುದಿಲ್ಲ. ಹೊರಗಿನವರಾಗಿಯೇ ಉಳಿದುಬೊಡ್ತೇವೆ. ಇಲ್ಲಿ ನಾವು ಕಷ್ಟ ಪಟ್ಟು ನಮ್ಮ ಪ್ರತಿಭೆ ತೋರಿಸಿ ಯಶಸ್ಸಾಗಬೇಕು, ಎಲ್ಲ ಕಠಿಣ ಪರಿಸ್ಥಿತಿಗಳನ್ನೂ ಎದುರಿಸಬೇಕು’ ಎಂದಿದ್ದಾರೆ.
ಇನ್ನೂ ಸುಶಾಂತ್ ಸಾವಿನ ಬಗ್ಗೆಗಿನ ಚರ್ಚೆಗಳ ವಿಚಾರವಾಗಿ ಮಾತನಾಡಿರುವ ಅವರು, ಸುಶಾಂತ್ ರ ಪರಿಚಯವೇ ಇಲ್ಲದವರು, ಅವರ ಬಗ್ಗೆ ಗೊತ್ತಿರದವರೆಲ್ಲ ಅವರ ಬಗ್ಗೆ ಡಿಬೆಟ್ ಗೆ ಇಳಿದಿದ್ದಾರೆ. ಇದ್ರಿಂದ ಪಟ್ನಾದಲ್ಲಿ ನೆಲೆಸಿರುವ ಅವರ ಪರಿವಾರದವರ ಪರಿಸ್ಥಿತಿ ಏನಾಗಿರಬಹುದು ಯೋಚಿಸಿದ್ದೀರಾ.? ನಿಜಕ್ಕೂ ಇದು ಬೇಸರದ ವಿಚಾರ ಎಂದಿದ್ದಾರೆ. ಇನ್ನೂ ಸುಶಾಂತ್ ಪ್ರತಿಭಾನ್ವಿತರು. ಉತ್ತಮ ನಟರು. ಕಡಿಮೆ ಸಮಯದಲ್ಲಿ ಯಶಸ್ಸಿನ ಉತ್ತುಂಕ್ಕೇರಿದವರು ಎಂದಿರುವ ಸೋನು, ಮುಂದೆ ಪ್ರತಿಭಾನ್ವಿತರು ಬಾಲಿವುಡ್ ಜಗತ್ತಿಗೆ ಕಾಲಿಡುವ ಮುನ್ನ ಗಟ್ಟಿಮನಸ್ಸು ಹೊಮದಿರಬೇಕು. ಆತ್ಮಸ್ಥೈರ್ಯ ವಿರಬೇಕು. ಯಂತಹದ್ದೇ ಕಠಿಣ ಪರಿಸ್ಥಿತಿ ಬಂದರೂ ಎದುರಿಬೇಕು ಎಂದು ಕಿವಿಮಾತು ನೀಡಿದ್ದಾರೆ.







