ಅದ್ಧೂರಿಯಾಗಿ ಎಂಟ್ರಿಕೊಟ್ಟು ಬಹದ್ದೂರ್ , ಭರ್ಜರಿಯಲ್ಲಿ ಮಿಂಚಿದ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ಚಿತ್ರ ಪೊಗರು ಕಳೆದ 2 ವರ್ಷಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಭಿಮಾನಿಗಳು ಚಿತ್ರ ರಿಲೀಸ್ ಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ನಡುವೆ ಕೊರೊನಾ ಆತಂಕದಿಮದಾಗಿ ಚಿತ್ರ ಬಿಡುಗಡೆ ಇನ್ನಷ್ಟು ತಡವಾಗಿದ್ದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಇದ್ದೆಲ್ಲರ ಬೆನ್ನಲ್ಲೇ ಚಿತ್ರ ಟೀಸರ್ ಬಿಡುಗಡೆಯಾದಾಗ , ಧ್ರುವ ಸರ್ಜಾ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ರು, ಅವರ ಖಡಕ್ ಡೈಲಾಗ್ ಮಾಸ್ ಲುಕ್ ನಿಂದಾಗಿ ಚಿತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಆಗಿತ್ತು. ಅದೆಲ್ಲ ಬಿಡಿ ಕೆಲ ತಿಂಗಳ ಹಿಂದೆ ಚಿತ್ರದ ಹಾಡೊಂದು ರಿಲೀಸ್ ಆಗಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿತ್ತು. ಎಸ್ ಅದೇ ಖರಾಬು ಸಾಂಗ್. 
ಆದ್ರೆ ವಿಶೇಷ ಅಂದ್ರೆ ಕನ್ನಡಿಗರನ್ನು ಮೋಡಿ ಮಾಡಿದ್ದ ಈ ಸಾಂಗ್ ಈಗ ತೆಲುಗಿನಲ್ಲಿ ರೆಡಿ ಆಗಿ ಟಾಲಿವುಡ್ ನಲ್ಲು ಸೆನ್‍ಶೇಷನ್ ಕ್ರಿಯೇಟ್ ಮಾಡಲು ಸಜ್ಜಾಗಿದೆ. ಪೊಗಲು ಎಂಬ ಟೈಟಲ್ ಇಟ್ಟಿರುವ ಚಿತ್ರದಲ್ಲಿ ತೆಲುಗು ವರ್ಷನ್ ಕರಾಬು ಹಾಡು ಸಿದ್ದವಾಗಿದ್ದು, ಆಗಸ್ಟ್ 6ರಮದು ಸಾಂಗ್ ರಿಲಿಸ್ ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಕನ್ನಡದಲ್ಲಿ ಈ ಹಾಡು ಈಗಾಗಲೇ 9 ಕೋಟಿಗೂ ಅಧಿಕ ವೀವ್ಸ್ ಗಳನ್ನು ಪಡೆದುಕೊಂಡಿದ್ದು, ತೆಲುಗಿನಲ್ಲೂ ಆಡಿಯೋಗೆ ಉತ್ತಮ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ. ಕನ್ನಡ ವರ್ಷನ್ ಅನ್ನು ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಕಾಂಪೋಸ್ ಮಾಡಿದ್ರೆ ತೆಲುಗು ವರ್ಷನ್ ಗೆ ಅರುಣ್ ಸಿಂಗ್ ಧ್ವನಿಯಾಗಿದ್ದಾರೆ. ತೆಲುಗಿನಲ್ಲಿ ಈ ಹಾಡು ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ
ಮನೆಮಾಡಿದೆ.








