ಬೆಂಗಳೂರು: ಹಿರಿಯ ನಟರೊಬ್ಬರ ಮಗಳು ಸೇರಿದಂತೆ 20ಕ್ಕೂ ಹೆಚ್ಚು ಯುವತಿಯ ಫೋಟೋಗಳನ್ನು ಅಶ್ಲೀಲ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತಿದ್ದ ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್‍ಗಳನ್ನು ಬಂಧಿಸಲಾಗಿದೆ.
ಅಜಯ್ ತನಿಕಾಚಲಂ, ವಿಶ್ವಕ್ ಬಂಧಿತ ಸಾಫ್ಟ್ ವೇರ್ ಇಂಜಿನಿಯರ್‍ಗಳು. ಆರೋಪಿಗಳು ಪ್ರತಿಷ್ಟಿತ ಕಾಲೇಜುಗಳ ವಿದ್ಯಾರ್ಥಿನಿಯರು, ಉಪನ್ಯಾಸಕಿಯರು ಹಾಗೂ ಹಳೆಯ ವಿದ್ಯಾರ್ಥಿನಿಯರ ಫೋಟೋಗಳನ್ನು ಫೇಸ್‍ಬುಕ್ ಇನ್‍ಸ್ಟಾ ಗ್ರಾಂನಿಂದ ಕದ್ದು ಅಶ್ಲೀಲ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತಿದ್ದರು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 7 ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸೈಬರ್ ಕ್ರೈಂ ಪೊಲೀಸರು, ಟೆಕ್ಕಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಯುವತಿಯರ ಫೋಟೋ ಕದ್ದು ಬ್ಲಾಕ್ ಮೇಲ್ ಮಾಡುವ ದಂಧೆಯನ್ನೇ ಆರೋಪಿಗಳು ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಕೃತ್ಯಕ್ಕೆ ಬಳಸಿದ್ದ ಲ್ಯಾಪ್‍ಟಾಪ್ ಹಾಗೂ ಮೊಬೈಲನ್ನು ಪೊಲೀಸರು ಸೀಜ್ ಮಾಡಿದ್ದಾರೆ.








