ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಮೂಲಕ ಸ್ಯಂಡಲ್ ವುಡ್ ಗೆ ಖಳನಾಯಕನಾಗಿ ಎಂಟ್ರಿಕೊಟ್ಟಿದ್ದ ನಟ ಕಬೀರ್ ದುಹಾನ್ ಸಿಂಗ್ ತಮ್ಮ ಬಹುಕಾಲದ ಗೆಳತಿ ಡಾಲಿ ಸಿಧು ಕಬೀರ್ ಜೊತೆಗೆ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಸುದೀಪ್ ಅವರ ಆಪ್ತ ಗೆಳೆಯ ಯರಾದ ಕಬೀರ್ ಪ್ರೇಯಸಿ ಡಾಲಿ ಸಿಧು ಜೊತೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಎಂಗೇಜ್ ಆಗಿರುವ ಈ ಜೋಡಿ, ಈ ವರ್ಷ ಮದುವೆ ಆಗಲು ನಿರ್ಧರಿಸಿದ್ದಾರೆ. ಡಿಸೆಂಬರ್ ನಲ್ಲಿ ಈ ಜೋಡಿ ಸರಳವಾಗಿ ವಿವಾಹವಾಗಲಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಡಾಲಿ ಹಾಗೂ ಕಬೀರ್ ಗೆ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ.
ಎಲ್ಲಾ ಅಂದುಕೊಮಡಂತೆ ಆಗಿದ್ದರೆ ಈ ವರ್ಷದ ಆರಂಭದಲ್ಲೇ ಕಬೀರ್ ಹಾಗೂ ಡಾಲಿ ಮದುವೆಯಾಗಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಮದುವೆ ದಿನಾಂಕವನ್ನು ಮುಂದೂಡಲಾಗಿತ್ತು. ಡಾಲಿ ಸಿಧು ಅವರು ಪಂಜಾಬಿ ಮೂಲದ ಗಾಯಕಿ. ಡಾಲಿ ಹಾಗೂ ಕಬೀರ್ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ವಿವಾಹದ ಬಂಧನಕ್ಕೆ ಒಳಗಾಗಲು ತಯಾರಿ ನಡೆಸಿದ್ದಾರೆ. ಮುಂಬೈನಲ್ಲಿ ಮದುವೆ ಸಮಾರಂಭ ನಡಡೆಯಲಿದ್ದು, ದೆಹಲಿಯಲ್ಲಿ ಆರತಕ್ಷತೆ ಸಮಾರಂಭ ಇಟ್ಟುಕೊಳ್ಲಲು ನಿರ್ಧರಿಸಲಾಗಿದೆ. ದಕ್ಷಿಣ ಭಾರತದಲ್ಲಿ ಕಳನಟನಾಗಿ ಖ್ಯಾತಿ ಪಡೆದಿರುವ ಕಬೀರ್ ಕನ್ನಡದ ಹೆಬ್ಬುಲಿ ನಂತರ ಅತಿರಥ, ಉದ್ಘರ್ಷ , ಪೈಲ್ವಾನ್ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದು, ವಿಲನ್ ಟೋನಿ ಪಾತ್ರದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. 








