ಕಳೆದ 20 ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೆ ಇಡೀ ರಾಜ್ಯವೇ ಬೆಚ್ಚಿಬೀಳುವ ಘಟನೆಯೊಂದು ನಡೆದಿತ್ತು. ಅದೇ ಕನ್ನಡದ ವರನಟ ಡಾ. ರಾಜ್ ಕುಮಾರ್ ಅಪಹರಣ. ಹೌದು 2000ರ ಜುಲೈ 30ರಂದು ತಮ್ಮ ಹುಟ್ಟೂರಾದ ಗಾಜನೂರಿಗೆ ಪತ್ನಿ ಪಾರ್ವತಮ್ಮ ಅವರೊಂದಿಗೆ ತೆರಳಿದ್ದ ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ್ದ. ಈ ಸುದ್ದಿ ಇಡೀ ದೇಶಾದ್ಯಂತ ಸಂಚಲ£ವನ್ನೇ ಸೃಷ್ಟಿಸಿತ್ತು. ಇಡೀ ರಾಜ್ಯದಾದ್ಯಂತ ಆತಂಕ, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ಕರಾಳ ಘಟನೆ ನಡೆದು ಇಂದಿಗೆ ಸರಿಯಾಗಿ 20 ವರ್ಷ ಕಳೆದಿದೆ. ಆ ವೇಳೆ ರಾಜ್ ಕುಮಾರ್ ಅವರು ಅಪಹರಣಗೊಂಡ ಸುಮಾರು 108 ದಿನಗಳಾದ ಬಳಿಕ ಸುರಕ್ಷಿತವಾಗಿ ಹಿಂದಿರುಗಿದ್ದರು. ರಾಜ್ಯದ ಜನರು ಅಣ್ಣವರು ಸುಕ್ಷಿತವಾಗಿ ಹಿಂದಿರುಗುವಂತೆ ಮೊರೆ ಹೋಗದ ದೇವರುಗಳಿಲ್ಲ. ಅಭಿಮಾನಿಗಳು ಹೊರದ ಹರಕೆಯಿಲ್ಲ. ತಮಗೆ ತುಂಬ ಪ್ರೀತಿ ಪಾತ್ರವಾಗಿದ್ದ ತಾಯಿಯ ಊರಾದ ಗಾಜನೂರಿಗೆ ಪತ್ನಿ ಹಾಗೂ ಕೆಲ ಸಂಬಂಧಿಗಳ ಜೊತೆಗೆ ರಾಜ್ ಕುಮಾರ್ ತೆರಳಿದ್ದರು. ಈ ವಿಚಾರ ಗೊತ್ತಾಗ್ತಿದ್ದಂತೆ ಸಂಚು ರೂಪಿಸಿದ್ದ ನರಹಂತಕ ವೀರಪ್ಪನ್. ತೋಟದ ಮನೆಯಲ್ಲಿ ರಾತ್ರಿ ಉಟ ಮುಗಿಸಿ ರಾಜ್ ಕುಮಾರ್ ಹಾಗೂ ಸಹಚರರು ಟಿವಿ ನೋಡುತ್ತಾ ಕುಳಿತ್ತಿದ್ದರು. ಈ ವೇಳೆ ಏಕಾಎಕಿ ಮನೆಗೆ 15 ಜನ ಸಹಚರರೊಂದಿಗೆ ನುಗ್ಗಿದ್ದ ನರಹಂತಕ ವೀರಪ್ಪನ್ ರಾಜ್ ಕುಮಾರ್ ಹಾಗೂ ಇತರೆ ಮೂವರನ್ನು ರಾತ್ರೋ ರಾತ್ರಿ ಕಿಡ್ನಾಪ್ ಮಾಡಿದ್ದ. ಅಣ್ಣವ್ರ ಪತ್ನಿ ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್ ಒಮದನ್ನ ನೀಡಿ ಆ ಮೂಲಕ ತನ್ನ ಬೆಡಿಕೆಗಳನ್ನು ಸರ್ಕಾರಕ್ಕೆ ತಲುಪಿಸುವಂತೆ ಬೆದರಿಕೆ ಹಾಕಿದ್ದ ಈ ಕಾಡುಗಳ್ಲ ವೀರಪ್ಪನ್. ಈ ಸುದ್ದಿ ತಿಳಿಯುತ್ತಿದ್ದಂತೆ ಇಡೀ ರಾಜ್ಯಕ್ಕೇ ರಾಜ್ಯವೇ ದಿಗ್ಭ್ರಾಂತವಾಗಿತ್ತು. ರಾಜ್ ಕುಮಾರ್ ಅವರ ಹಿಂದಿರುಗುವಿಕೆಗಾಗಿ ಲಕ್ಷಾಂತರ ಅಭಿಮಾನಿಗಳು ಜಾತಕಪಕ್ಷಿಗಳಂತೆ ಕಾದುಕುಳಿತಿದ್ರು.
PF ಹೊಸ ಗೈಡ್ ಲೈನ್ಸ್: UAN ಜೊತೆಗೆ ಆಧಾರ್ ಲಿಂಕ್ ಕಡ್ಡಾಯವಲ್ಲ
PF ಹೊಸ ಗೈಡ್ ಲೈನ್ಸ್: UAN ಜೊತೆಗೆ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಹೇಳಿದೆ ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ. 1: EPFO ಸುತ್ತೋಲೆ EPFO (ಉದ್ಯೋಗಿಗಳ...