ADVERTISEMENT
Sunday, June 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಿಜವಾದ ಟ್ರಬಲ್ ಶೂಟರ್ ಯಾರು ? ಡಿಕೆ ಬ್ರದರ್ಸ್ ವಿರುದ್ಧ ಬ್ರದರ್ ಎಚ್‍ಡಿಕೆ ವಾಗ್ದಾಳಿ

admin by admin
July 30, 2020
in Newsbeat, Politics, ರಾಜಕೀಯ
DK Shivakumar
Share on FacebookShare on TwitterShare on WhatsappShare on Telegram

ನಿಜವಾದ ಟ್ರಬಲ್ ಶೂಟರ್ ಯಾರು ? ಡಿಕೆ ಬ್ರದರ್ಸ್ ವಿರುದ್ಧ ಬ್ರದರ್ ಎಚ್‍ಡಿಕೆ ವಾಗ್ದಾಳಿ

ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ… ಯಾರು ಮಿತ್ರರೂ ಅಲ್ಲ. ಯಾವಾಗ ಶತ್ರುಗಳಾಗ್ತಾರೋ… ಯಾವಾಗ ಮಿತ್ರರಾಗ್ತಾರೋ ಎಂಬುದು ಗೊತ್ತೇ ಆಗಲ್ಲ. ಪಾಪ ರಾಜಕಾರಣಿಗಳನ್ನು ನಂಬಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಯಕರ್ತರ ಪಾಡನ್ನಂತೂ ಹೇಳುವುದೇ ಬೇಡ.
ನೆನಪಿರಬಹುದು.. ಕಳೆದ ವಿಧಾನ ಸಭೆಯ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಾಟಕಗಳನ್ನು ವಿಧಾನ ಸೌಧದಲ್ಲಿ ನೋಡಿದ್ದೀರಿ. ಚುನಾವಣೆಗೆ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಬ್ಬರನ್ನೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಮತ ಕೇಳುತ್ತಿದ್ದರು. ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ನಾಯಕರು ನೇರವಾಗಿ ಹೋಗಿದ್ದು ದೇವೇಗೌಡರ ಮನೆ ಬಾಗಿಲಿಗೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ.. ನಾವು ಬೆಂಬಲ ನೀಡುತ್ತೇವೆ ಅಂತ ಹೇಳಿದಾಗ ದೇವೇಗೌಡರಿಗೆ ಆದ ಸಂತಸಕ್ಕೆ ಪಾರವೇ ಇಲ್ಲ. ಯಾಕಂದ್ರೆ ಜನ ಬೆಂಬಲವಿಲ್ಲದಿದ್ರೂ ಮಗ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಅಂದಾಗ ಯಾರು ಬೇಡ ಅಂತಾರೆ. ಹಾಗೇ ಸಮ್ಮಿಶ್ರ ಸರ್ಕಾರವೂ ರಚನೆಯಾಯ್ತು. ಪರಮೇಶ್ವರ್ ಉಪಮುಖ್ಯಮಂತ್ರಿಯಾದ್ರು.
ಇನ್ನೊಂದೆಡೆ ಪರಮ ಶತ್ರುಗಳಾಗಿ ಕಿತ್ತಾಡಿಕೊಳ್ಳುತ್ತಿದ್ದ ಡಿ.ಕೆ. ಶಿವ ಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಆಪ್ತ ಮಿತ್ರರಾದ್ರು. ಅಷ್ಟೇ ಅಲ್ಲ ಜೋಡೆತ್ತುಗಳು ಎಂದು ಹೇಳಿಕೊಳ್ಳುತ್ತಾ ಸಮ್ಮಿಶ್ರ ಸರ್ಕಾರದ ಎರಡು ಕಣ್ಣುಗಳಂತಿದ್ದರು. ಮಂಡ್ಯ ಲೋಕ ಸಭೆಯ ಉಪ ಚುನಾವಣೆಯಲ್ಲೂ ಡಿಕೆಶಿ ಮತ್ತು ಎಚ್‍ಡಿಕೆ ಜೊತೆಯಾಗಿ ನಿಂತು ಪ್ರಚಾರ ಮಾಡಿದ್ದರು.
ಆನಂತರ ಸಮ್ಮಿಶ್ರ ಸರ್ಕಾರ ಬಿದ್ದು ಹೋಯ್ತು. ಬಿಎಸ್‍ವೈ ಸರ್ಕಾರ ರಚನೆ ಮಾಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾದ್ರು. ಆಗ ಡಿ.ಕೆ. ಶಿವ ಕುಮಾರ್ ನೇರವಾಗಿ ಮುಂಬೈಗೆ ಹೋಗಿ ಅಲ್ಲಿ ಅತೃಪ್ತ ಶಾಸಕರನ್ನು ಮನವೋಲಿಸಿದ್ದರು. ಅಲ್ಲದೆ ಮುಂಬೈ ಪೊಲೀಸರ ವಶಕ್ಕೂ ಪಡೆದುಕೊಂಡಿದ್ದರು. ಅಂದು ಡಿ.ಕೆ. ಶಿವಕುಮಾರ್ ಸರ್ಕಾರ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು.
ಆದ್ರೆ ಡಿ.ಕೆ. ಶಿವಕುಮಾರ್ ಅಂದು ಡ್ರಾಮಾ ಮಾಡಿದ್ರು ಎಂಬುದು ಕುಮಾರಸ್ವಾಮಿಯವರ ಈಗಿನ ಹೇಳಿಕೆಯಿಂದ ಗೊತ್ತಾಗುತ್ತದೆ. ಮಂಡ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಸಾಥ್ ನೀಡಲಿಲ್ಲ. ಡಿ.ಕೆ. ಶಿವಕುಮಾರ್ ಪ್ರಚಾರಕ್ಕೆ ಬಂದು ಭಾಷಣ ಮಾಡಿ ಹೋಗಿದ್ರು. ಸ್ಥಳೀಯ ಕಾಂಗ್ರೆಸ್ ನಾಯಕರು ನಮಗೆ ಬೆಂಬಲ ನೀಡಿಲ್ಲ. ಅವರು ಮನಸ್ಸು ಮಾಡಿದ್ರೆ ಆಗುತ್ತಿತ್ತು ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದ್ರು.
ಇನ್ನು ರಾಮನಗರದಲ್ಲಿ ನನ್ನ ಪ್ರಾಬಲ್ಯವನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ಇದೆ. ಇದಕ್ಕಾಗಿ ಡಿಕೆಶಿ ಅವರ ತಮ್ಮ ಸಂಸದ ಡಿ.ಕೆ. ಸುರೇಶ್ ಕುಮಾರ್ ಮೂಲಕ ರಾಮನಗರದಲ್ಲಿ ನಮ್ಮ ಪಕ್ಷವನ್ನು ಮುಗಿಸುವ ಯತ್ನ ನಡೆಸುತ್ತಿದ್ದಾರೆ. ಆದ್ರೆ ಅದೆಲ್ಲಾ ಸಾಧ್ಯವಿಲ್ಲ. ನನಗೆ ನನ್ನ ಜನರ ಬಗ್ಗೆ ನಂಬಿಕೆ ಇದೆ ಎಂದು ಎಚ್‍ಡಿಕೆ ಹೇಳಿದ್ರು.
ಡಿ.ಕೆ. ಶಿವಕುಮಾರ್ ಮತ್ತು ನಾನು ಅಂದು ಮಿತ್ರರಾಗಿದ್ದು ನಿಜ. ಆದ್ರೆ ಈಗ ಅಲ್ಲ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಮುಖ್ಯ ಕಾರಣ ಬೆಳಗಾವಿ ರಾಜಕಾರಣ. ಬೆಳಗಾವಿ ರಾಜಕಾರಣದಿಂದಲೇ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದು. ಡಿಕೆಶಿ ಮನಸ್ಸು ಮಾಡಿದ್ರೆ ಸರ್ಕಾರವನ್ನು ಉಳಿಸಬಹುದಿತ್ತು. ಟ್ರಬಲ್ ಶೂಟರ್ ಯಾರು ಎಂಬುದು ಗೊತ್ತಿದೆ ಎಂದು ಎಚ್‍ಡಿಕೆ ಡಿಕೆಶಿ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

Related posts

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

June 28, 2026
ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

June 28, 2026
Tags: BJPCongressD.K. Shiva kumard.k. suresh kumarH D KUMARASWAMYJDSkpccKPCC PresidentKPCC President D.K. shiva kumar
ShareTweetSendShare
Join us on:

Related Posts

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

by Shwetha
June 28, 2026
0

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಾಹನ ಪ್ರೇಮ ಇಡೀ ದೇಶಕ್ಕೇ ಗೊತ್ತು. ಅವರ ಬಳಿ ಇರುವ ಐಷಾರಾಮಿ ಕಾರುಗಳ ಸಾಲಿಗೆ ಈಗ ವಿಮಾನದಂತಹ...

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

by Shwetha
June 28, 2026
0

ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರೋಬ್ಬರಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಘೋಷಿಸುವ ಮೂಲಕ...

ಗ್ಯಾಂಗ್‌ಸ್ಟರ್ ಅವತಾರದಲ್ಲಿ ವಿನೋದ್ ಪ್ರಭಾಕರ್ ಅಬ್ಬರ: 80ರ ದಶಕದ ಭೂಗತ ಲೋಕಕ್ಕೆ ಮತ್ತೆ ಕರೆದೊಯ್ದ ಬಲರಾಮ

ಗ್ಯಾಂಗ್‌ಸ್ಟರ್ ಅವತಾರದಲ್ಲಿ ವಿನೋದ್ ಪ್ರಭಾಕರ್ ಅಬ್ಬರ: 80ರ ದಶಕದ ಭೂಗತ ಲೋಕಕ್ಕೆ ಮತ್ತೆ ಕರೆದೊಯ್ದ ಬಲರಾಮ

by Shwetha
June 28, 2026
0

2007 ರಲ್ಲಿ ತೆರೆಕಂಡ ಆ ದಿನಗಳು ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಮೈಲಿಗಲ್ಲು. ರಕ್ತಪಾತವಿಲ್ಲದೆಯೂ ಭೂಗತ ಲೋಕದ ಕಥೆಯನ್ನು ಎಷ್ಟು ಕಲಾತ್ಮಕವಾಗಿ ಹೇಳಬಹುದು ಎಂದು ನಿರ್ದೇಶಕ...

ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪೊಲೀಸರಿಗೆ ಬಿತ್ತು ಪೆಟ್ಟು : ಪ್ರದೀಪ್ ಈಶ್ವರ್ ಹಾವಭಾವಕ್ಕೆ ಕೆರಳಿದ ಜೆಡಿಎಸ್ ಕಾರ್ಯಕರ್ತರು

ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪೊಲೀಸರಿಗೆ ಬಿತ್ತು ಪೆಟ್ಟು : ಪ್ರದೀಪ್ ಈಶ್ವರ್ ಹಾವಭಾವಕ್ಕೆ ಕೆರಳಿದ ಜೆಡಿಎಸ್ ಕಾರ್ಯಕರ್ತರು

by Shwetha
June 28, 2026
0

ಚಿಕ್ಕಬಳ್ಳಾಪುರ:ನಗರದ ಕನ್ನಡ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿತು. ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಹಾಗೂ ಅವರ ವಿರುದ್ಧ ಒಕ್ಕಲಿಗ...

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

by Shwetha
June 28, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ ಸಂಘಟನೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯೂತ್ ಕಾಂಗ್ರೆಸ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram