ಸಿಎಎ ಹಾಗೂ ಎನ್ ಪಿಆರ್ ವಿಚಾರವಾಗಿ ಆತಂಕಗೊಂಡಿರುವ ತಮಿಳುನಾಡು ಮುಸ್ಲಿಂ ಮುಖಂಡರು ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಚೆನ್ನೈನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ ಜಮಾತ್-ಉಲ್-ಉಲಾಮಾ ಸಬಾಯ್ ಸಂಘಟನೆಯ ಮುಖಂಡರು ಎನ್ ಪಿಆರ್ ಕುರಿತು ಇರುವ ಗೊಂದಲಗಳ ಕುರಿತು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಎಂ ಬಖಾವಿ, ನಮ್ಮ ನಿಯೋಗ ರಜಿನಿಕಾಂತ್ ರನ್ನ ಭೇಟಿಯಾಗಿ, ಎನ್ ಪಿಆರ್ ನಿಂದ ಮುಸ್ಲಿಮರಿಗೆ ಆಗುವ ಸಮಸ್ಯೆಗಳ ಬಗ್ಗೆ ನಾವು ವಿವರಿಸಿದ್ದೇವೆ. ರಜಿನಿಕಾಂತ್ ಅವರು ನಮ್ಮ ವಾದವನ್ನ ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಮರಲ್ಲಿ ಆತಂಕ ನಿವಾರಿಸಲು ಅಗತ್ಯವಾದ ಕೆಲಸವನ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.








