ಮುಂಬೈನಲ್ಲಿ ಒಂದೆಡೆ ಕೊರೊನಾ ಆರ್ಭಟದಿಂದ ಜನರು ತತ್ತರಿಸಿಹೋಗಿದ್ದಾರೆ. ದಿನೇ ದಿನೇ ಮುಂಬೈನಲ್ಲಿ ಕೊರೊನಾ ಸ್ಫೋಟವಾಗ್ತಿದ್ದು, ದೇಶದಲ್ಲಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ವರುಣ ಆರ್ಭಟಿಸುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ವರುಣಾರ್ಭಟ ಜೋರಾಗಿಯೇ ಇದೆ.
ಇದೀಗ ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಆಗಸ್ಟ್ 3 ರಿಂದ ಆಗಸ್ಟ್ 5 ರವರೆಗೂ ಮಾಯಾನಗರಿ ಮುಂಬೈನ ಹಲವೆಡೆ ಧಾರಾಕಾರ ಮಳೆಯಾಗಲಿದೆ. ಮೊದಲೇ ಕೊರೊನಾ ಮಾಹಾಮಾರಿಯ ಭೀಕರತೆಯಿಂದ ತತ್ತರಿಸಿಹೋಗಿರುವ ಜನರಿಗೆ ಇನ್ನಷ್ಟು ಆತಂಕ ಶುರುವಾಗಿದೆ. ಇನ್ನೂ ಭಾರೀ ಮಳೆ ಬಂದರೆ ಸೋಂಕು ಮತ್ತಷ್ಟು ತೀವ್ರವಾಗಿ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ.
ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!
ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...








