ಕೆಲ ದುಷ್ಕರ್ಮಿಗಳು ತೆಲುಗಿನ ಖ್ಯಾತ ನಟ ಮೋಹನ್ ಬಾಬು ಮನೆಗೆ ನುಗ್ಗಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ನಿನ್ನೆ ತಡರಾತ್ರಿ ನಾಲ್ವರು ಅಪರಿಚಿತರು ಇನ್ನೋವಾ ಕಾರಿನಲ್ಲಿ ಮೋಹನ್ ಬಾಬು ಅವರ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಮೋಹನ್ ಅವರು ಪಹಡಿ ಷರೀಫ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜಕೀಯ ಹಾಗೂ ನಟನೆ ಎರಡರಲ್ಲೂ ಸಕ್ರಿಯರಾಗಿರುವ ಮೋಹನ್ ಬಾಬು ಅವರಿಗೆ ಕೊಲೆ ಬೆದರಿಕೆ ಯಾವ ಕಾರಣಕ್ಕೆ ಬಂದಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಇನ್ನೂ ತನಿಖೆ ವೇಳೆ ಈ ಕಾರು ವಿಜಯಲಕ್ಷ್ಮಿ ಎಂಬ ಮಹಿಳೆಯ ಹೆಸರಿನಲ್ಲಿ ನೊಂದಣಿಯಾಗಿದ್ದು, ಕಾರಿನ ಸಂಖ್ಯೆ ಂಓ ಂP 31 0004 ಎಂಬುದು ತಿಳಿದುಬಂದಿದೆ. ಮತ್ತೊಂದೆಡೆ ಈ ಬಗ್ಗೆ ನಟನ ಕುಟುಂಬಸ್ಥರು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸದೇ ಇರುವುದು ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಯಾವ ವಿಚಾರವಾಗಿ ಈ ಕೃತ್ಯ ವೆಸಲಾಗಿದೆ ಎಂಬುದು ಸಂಪೂರ್ಣ ತನಿಖೆಯ ನಂತರವಷ್ಟೇ ಬಹಿರಂಗವಾಗಲಿದೆ. 
ಅವರ ಮೆದುಳೇಕೆ ದಿನೇ ದಿನೇ ಸುಳ್ಳಿನ ಮೇಲೆ ಕೆಲಸ ಮಾಡುತ್ತಿದೆ? ರಾಹುಲ್ ಫೋನ್ ಕದ್ದಾಲಿಸಲು ಯಾರಿಗೂ ಆಸಕ್ತಿಯಿಲ್ಲ:ರಾಹುಲ್ ಗಾಂಧಿ ಮೊದಲು ತಮ್ಮ ತಲೆ ಪರೀಕ್ಷಿಸಿಕೊಳ್ಳಲಿ ಎಂದ ರಾಜೀವ್ ಚಂದ್ರಶೇಖರ್
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ದೂರವಾಣಿ ಕದ್ದಾಲಿಕೆ ಆರೋಪವು ಈಗ ರಾಷ್ಟ್ರ...








