ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ಜನವರಿ ತಿಂಗಳಲ್ಲಿ ಶೇ. 7. 16 ರಷ್ಟಿದ್ದ ದೇಶದಲ್ಲಿನ ನಿರುದ್ಯೋಗ ಪ್ರಮಾಣ ಫೆಬ್ರವರಿಯಲ್ಲಿ ಶೇ. 7. 78ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಈವರೆಗೂ ಇಷ್ಟು ಪ್ರಮಾಣದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿರಲಿಲ್ಲ. ಮುಂಬೈ ಮೂಲದ ಖಾಸಗಿ ಥಿಂಕ್ ಥ್ಯಾಂಕ್ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಜನವರಿ ತಿಂಗಳಲ್ಲಿ ಶೇ. 5. 97 ರಷ್ಟಿದ್ದ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ. 7. 37 ರಷ್ಟು ಏರಿಕೆಯಾಗಿದೆ. ಆದಾಗ್ಯೂ, ನಗರ ಪ್ರದೇಶದಲ್ಲಿ ಇದು ವಿರುದ್ಧವಾಗಿದೆ. ಶೇ. 9. 7 ರಿಂದ ಶೇ, 8.65ಕ್ಕೆ ಇಳಿಕೆಯಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧದ ಇಡಿ ತನಿಖೆ ಅತಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಬೆಂಗಳೂರು ಮಟ್ಟದ...








