ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ಜನವರಿ ತಿಂಗಳಲ್ಲಿ ಶೇ. 7. 16 ರಷ್ಟಿದ್ದ ದೇಶದಲ್ಲಿನ ನಿರುದ್ಯೋಗ ಪ್ರಮಾಣ ಫೆಬ್ರವರಿಯಲ್ಲಿ ಶೇ. 7. 78ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಈವರೆಗೂ ಇಷ್ಟು ಪ್ರಮಾಣದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿರಲಿಲ್ಲ. ಮುಂಬೈ ಮೂಲದ ಖಾಸಗಿ ಥಿಂಕ್ ಥ್ಯಾಂಕ್ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಜನವರಿ ತಿಂಗಳಲ್ಲಿ ಶೇ. 5. 97 ರಷ್ಟಿದ್ದ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ. 7. 37 ರಷ್ಟು ಏರಿಕೆಯಾಗಿದೆ. ಆದಾಗ್ಯೂ, ನಗರ ಪ್ರದೇಶದಲ್ಲಿ ಇದು ವಿರುದ್ಧವಾಗಿದೆ. ಶೇ. 9. 7 ರಿಂದ ಶೇ, 8.65ಕ್ಕೆ ಇಳಿಕೆಯಾಗಿದೆ.
ಯುಪಿ ಕರಡು ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂಗಳ ಹೆಸರು ಗಾಯಬ್: ಮುಸ್ಲಿಂ ಮತದಾರರ ಪ್ರಮಾಣ ಶೇ. 1.65ರಷ್ಟು ಹೆಚ್ಚಳ- ಚುನಾವಣಾ ಆಯೋಗದ ಮೊರೆ ಹೋದ ಸಿಎಂ ಯೋಗಿ ಆದಿತ್ಯನಾಥ್!
ಲಖನೌ: ಉತ್ತರ ಪ್ರದೇಶದಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆಡಳಿತಾರೂಢ ಬಿಜೆಪಿ...








