ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರಿಯಾದ ಇತಿಹಾಸ ಪುಸ್ತಕಗಳಲ್ಲಿವೆ ಅಯೋಧ್ಯೆ ಬಗ್ಗೆಗಿನ ಕಥೆ ಗಳು

admin by admin
August 4, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಕೊರಿಯಾದ ಇತಿಹಾಸ ಪುಸ್ತಕಗಳಲ್ಲಿವೆ ಅಯೋಧ್ಯೆ ಬಗ್ಗೆಗಿನ ಕಥೆ ಗಳು

ಅಯೋಧ್ಯೆ, ಅಗಸ್ಟ್4: ಕೊರಿಯನ್ನರು ತಮ್ಮ ಪೂರ್ವಜರಿಗೆ ಪವಿತ್ರ ನಗರವಾದ ಅಯೋಧ್ಯೆಯೊಂದಿಗೆ ಮಹತ್ವದ ಸಂಬಂಧವಿದೆ ಎಂದು ನಂಬುತ್ತಾರೆ.
ಕೊರಿಯಾದ ಹಲವಾರು ಕಥೆಗಳು ಸೂರಿರತ್ನ ಎಂಬ ಭಾರತೀಯ ರಾಜಕುಮಾರಿಯು ದಕ್ಷಿಣ ಕೊರಿಯಾದ ರಾಜ ಕಿಂಗ್ ಕಿಮ್ ಸು-ರೋ ಎಂಬಾತನನ್ನು ಮದುವೆಯಾಗಿದ್ದಳು ಎಂದು ಹೇಳುತ್ತದೆ. ಇದೀಗ ಭಾರತದ ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್-ಕಿಲ್ ಅವರು ಕೊರಿಯಾ ಮತ್ತು ಅಯೋಧ್ಯೆಯ‌ ಬಗ್ಗೆಗಿನ ‌ಇತಿಹಾಸದಲ್ಲಿ ಹುದುಗಿರುವ ಅತ್ಯಂತ ಆಳವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ.

Related posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

August 24, 2026
ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

August 23, 2026


ಕೊರಿಯಾದ ಹಳೆಯ ಏಷ್ಯಾದ ಇತಿಹಾಸ ಪುಸ್ತಕಗಳಲ್ಲಿ ಭಾರತೀಯ ರಾಜಕುಮಾರಿ ಸ್ಥಳೀಯ ಕೊರಿಯಾದ ರಾಜ ಕಿಮ್ ಸುರೋನನ್ನು ಮದುವೆಯಾದ ಕಥೆಗಳಿವೆ. ಈ ಮೊದಲು ಜನರು ಇದನ್ನು ಕೇವಲ ದಂತಕಥೆಯೆಂದು ಪರಿಗಣಿಸುತ್ತಿದ್ದರು. ಆದಾಗ್ಯೂ, ಪುರಾತತ್ತ್ವಜ್ಞರು ರಾಜರ ಸಮಾಧಿ ಬಳಿ ಅಯೋಧ್ಯೆಗೆ ಸೇರಿದ ಕಲಾಕೃತಿಗಳನ್ನು ಕಂಡುಹಿಡಿದರು ಎಂದು ರಾಯಭಾರಿ ಹೇಳಿದ್ದಾರೆ. ಕೊರಿಯನ್ನರು ಪ್ರಸ್ತುತ ಈ ದಂತಕಥೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಕೊರಿಯಾದಲ್ಲಿ ಚಾಲ್ತಿಯಲ್ಲಿರುವ ದಂತಕಥೆ

ದಂತಕಥೆಯ ಪ್ರಕಾರ, 2000 ವರ್ಷಗಳ ಹಿಂದೆ, ಸೂರರತ್ನ ಎಂಬ ಭಾರತೀಯ ರಾಜಕುಮಾರಿ, ದಕ್ಷಿಣ ಕೊರಿಯಾದ ರಾಜನಾದ ಗೀಮ್‌ಗ್ವಾನ್ ಗಯಾದ ಕಿಮ್ ಸು-ರೋ ಎಂಬಾತನನ್ನು ಮದುವೆಯಾಗುತ್ತಾಳೆ ಮತ್ತು ತನ್ನ ಹೆಸರನ್ನು ಹಿಯೋ ಹ್ವಾಂಗ್-ಒಕೆ ಎಂದು ಬದಲಾಯಿಸುತ್ತಾಳೆ. ನಂತರ ದಂಪತಿಗಳು ದಕ್ಷಿಣ ಕೊರಿಯಾದ ಪ್ರಸ್ತುತ ಗಿಮ್ಹೇ ಪ್ರದೇಶದಲ್ಲಿ ಕರಕ್ ರಾಜವಂಶವನ್ನು ಪ್ರಾರಂಭಿಸಿದರು. ಕೊರಿಯಾದ ಪುಸ್ತಕ ‘ಸಾಮ್ಗುಕ್ ಯೂಸಾ’ — ಪುಸ್ತಕದಲ್ಲಿ ಈ ಕಥೆಯ ಉಲ್ಲೇಖವಿದೆ. ರಾಜಕುಮಾರಿ ಪ್ರಶಂಸಿಸಿದ ‘ಆಯುಟಾ’ ಸಾಮ್ರಾಜ್ಯದ ಬಗ್ಗೆಯೂ ಒಂದು ಉಲ್ಲೇಖವಿದೆ.


ರಾಜ ದಂಪತಿಗಳು 150 ವರ್ಷಗಳ ಕಾಲ ಬದುಕಿದ್ದರು ಮತ್ತು ಅವರಿಗೆ 10 ಜನ ಗಂಡು ಮಕ್ಕಳಿದ್ದರು. ಭಾರತೀಯ ರಾಜಕುಮಾರಿಯ ಕಥೆ ದಂತಕಥೆ ಎಂದು ಹಲವರು ನಂಬಿದರೆ, ಕಿಮ್ ಬೈಂಗ್-ಮೊ ಆಯುಟಾ ಎಂಬ ಇತಿಹಾಸ ತಜ್ಞರು, ವಾಸ್ತವವಾಗಿ ಅದು ಅಯೋಧ್ಯೆ ಎಂದು ದೃಢ ಪಡಿಸಿದ್ದಾರೆ .
ಆದಾಗ್ಯೂ, ರಾಜಕುಮಾರಿಯ ಈ ಕಥೆ ನಿಜವೆಂದು ಸಾಬೀತುಪಡಿಸಲು ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಸಾಂಪ್ರದಾಯಿಕವಾಗಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಕ್ಕಳು ತಮ್ಮ ತಂದೆಯ ಉಪನಾಮವನ್ನು ತೆಗೆದುಕೊಳ್ಳುತ್ತಾರೆ. ಕಿಮ್ ಎನ್ನುವುದು ಕೊರಿಯಾದಲ್ಲಿ ಬಹಳ ಸಾಮಾನ್ಯವಾದ‌ ತಂದೆಯ ಉಪನಾಮವಾಗಿದೆ.
ಆದರೆ ದಂತಕಥೆಯ ಪ್ರಕಾರ, ರಾಣಿ ಹಿಯೋ ಹ್ವಾಂಗ್-ಒಕೆ ತನ್ನ ಮಕ್ಕಳು ತನ್ನ ಉಪನಾಮವನ್ನು ಹೊಂದಿಲ್ಲ ಎಂದು ಅಸಮಾಧಾನಗೊಂಡಳು ಮತ್ತು ನಂತರ, ರಾಜನು ಅವರ ಇಬ್ಬರು ಗಂಡುಮಕ್ಕಳ ಹೆಸರಲ್ಲಿ ಹಿಯೋ ಉಪನಾಮ ಬಳಸಲು ಅನುಮತಿಸಿದನು.


2000 ರಲ್ಲಿ ಅಯೋಧ್ಯೆ ಮತ್ತು ಗಿಮ್ಹೆಯನ್ನು ಸಹೋದರಿ ನಗರಗಳಾಗಿ ಅಭಿವೃದ್ಧಿಪಡಿಸಲು ಮತ್ತು ರಾಣಿಯ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರತಿವರ್ಷ ರಾಣಿಯ ವಂಶವು ಅಯೋಧ್ಯೆಗೆ ತನ್ನ ತಾಯಿನಾಡಿನಲ್ಲಿ ರಾಜಕುಮಾರಿಗೆ ಗೌರವ ಸಲ್ಲಿಸಲು ಬರುತ್ತದೆ. ಎರಡು ವರ್ಷಗಳ ಹಿಂದೆ, ಕೊರಿಯಾದ ನಿಯೋಗವು ಸ್ಮಾರಕವನ್ನು ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಿಮ್ ಜಂಗ್-ಸೂಕ್ ಅವರು 2018 ರಲ್ಲಿ ಅಯೋಧ್ಯೆಯ ಕ್ವೀನ್ ಹುಹ್ ಪಾರ್ಕ್‌ನಲ್ಲಿ ರಾಣಿ ಸ್ಮಾರಕವನ್ನು ಉದ್ಘಾಟಿಸಿದ್ದರು

Tags: AyodhyaKorianLatestRam Mandirramjanmabhoomisouth koria
ShareTweetSendShare
Join us on:

Related Posts

9-dreams-bz-cup-media-cricket-tournament-kannada-media-auction

ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ

by admin
August 24, 2026
0

ಬೆಂಗಳೂರು: ಕನ್ನಡ ಮಾಧ್ಯಮ ರಂಗದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ವಿನೂತನ ಕ್ರಿಕೆಟ್ ಟೂರ್ನಿಗೆ 9 ಡ್ರೀಮ್ಸ್ ಸಂಸ್ಥೆ...

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

by Shwetha
August 23, 2026
0

ನವದೆಹಲಿ: ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ವಂದೇ ಮಾತರಂ ಗೀತೆಯ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ಈಗ ಬಾಲಿವುಡ್ ಮತ್ತು ರಾಜಕೀಯ...

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

by Shwetha
August 23, 2026
0

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇ20 (ಶೇ. 20ರಷ್ಟು ಎಥೆನಾಲ್ ಮಿಶ್ರಿತ ಇಂಧನ) ನೀತಿಯು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣವಾಗಿದೆ ಎಂದು ಕಾಂಗ್ರೆಸ್...

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

by Shwetha
August 23, 2026
0

ಬೆಂಗಳೂರು: ನೈಸ್ ರಸ್ತೆಯ ಅಕ್ರಮ ಟೋಲ್ ವಸೂಲಾತಿ ವಿರುದ್ಧ ಸಮರ ಸಾರಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದೀಗ ಮತ್ತಷ್ಟು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. ಎಫ್‌ಐಆರ್ ದಾಖಲಾದರೂ...

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

by Shwetha
August 23, 2026
0

ತಿರುವನಂತಪುರಂ: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಗೆ ವರ್ಗಾವಣೆ ಮಾಡಿ ರೈಲ್ವೆ ಮಂಡಳಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ತೀವ್ರ ಆಕ್ಷೇಪ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram