ಕೊರಿಯಾದ ಇತಿಹಾಸ ಪುಸ್ತಕಗಳಲ್ಲಿವೆ ಅಯೋಧ್ಯೆ ಬಗ್ಗೆಗಿನ ಕಥೆ ಗಳು
ಅಯೋಧ್ಯೆ, ಅಗಸ್ಟ್4: ಕೊರಿಯನ್ನರು ತಮ್ಮ ಪೂರ್ವಜರಿಗೆ ಪವಿತ್ರ ನಗರವಾದ ಅಯೋಧ್ಯೆಯೊಂದಿಗೆ ಮಹತ್ವದ ಸಂಬಂಧವಿದೆ ಎಂದು ನಂಬುತ್ತಾರೆ.
ಕೊರಿಯಾದ ಹಲವಾರು ಕಥೆಗಳು ಸೂರಿರತ್ನ ಎಂಬ ಭಾರತೀಯ ರಾಜಕುಮಾರಿಯು ದಕ್ಷಿಣ ಕೊರಿಯಾದ ರಾಜ ಕಿಂಗ್ ಕಿಮ್ ಸು-ರೋ ಎಂಬಾತನನ್ನು ಮದುವೆಯಾಗಿದ್ದಳು ಎಂದು ಹೇಳುತ್ತದೆ. ಇದೀಗ ಭಾರತದ ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್-ಕಿಲ್ ಅವರು ಕೊರಿಯಾ ಮತ್ತು ಅಯೋಧ್ಯೆಯ ಬಗ್ಗೆಗಿನ ಇತಿಹಾಸದಲ್ಲಿ ಹುದುಗಿರುವ ಅತ್ಯಂತ ಆಳವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ.
ಕೊರಿಯಾದ ಹಳೆಯ ಏಷ್ಯಾದ ಇತಿಹಾಸ ಪುಸ್ತಕಗಳಲ್ಲಿ ಭಾರತೀಯ ರಾಜಕುಮಾರಿ ಸ್ಥಳೀಯ ಕೊರಿಯಾದ ರಾಜ ಕಿಮ್ ಸುರೋನನ್ನು ಮದುವೆಯಾದ ಕಥೆಗಳಿವೆ. ಈ ಮೊದಲು ಜನರು ಇದನ್ನು ಕೇವಲ ದಂತಕಥೆಯೆಂದು ಪರಿಗಣಿಸುತ್ತಿದ್ದರು. ಆದಾಗ್ಯೂ, ಪುರಾತತ್ತ್ವಜ್ಞರು ರಾಜರ ಸಮಾಧಿ ಬಳಿ ಅಯೋಧ್ಯೆಗೆ ಸೇರಿದ ಕಲಾಕೃತಿಗಳನ್ನು ಕಂಡುಹಿಡಿದರು ಎಂದು ರಾಯಭಾರಿ ಹೇಳಿದ್ದಾರೆ. ಕೊರಿಯನ್ನರು ಪ್ರಸ್ತುತ ಈ ದಂತಕಥೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಕೊರಿಯಾದಲ್ಲಿ ಚಾಲ್ತಿಯಲ್ಲಿರುವ ದಂತಕಥೆ
ದಂತಕಥೆಯ ಪ್ರಕಾರ, 2000 ವರ್ಷಗಳ ಹಿಂದೆ, ಸೂರರತ್ನ ಎಂಬ ಭಾರತೀಯ ರಾಜಕುಮಾರಿ, ದಕ್ಷಿಣ ಕೊರಿಯಾದ ರಾಜನಾದ ಗೀಮ್‌ಗ್ವಾನ್ ಗಯಾದ ಕಿಮ್ ಸು-ರೋ ಎಂಬಾತನನ್ನು ಮದುವೆಯಾಗುತ್ತಾಳೆ ಮತ್ತು ತನ್ನ ಹೆಸರನ್ನು ಹಿಯೋ ಹ್ವಾಂಗ್-ಒಕೆ ಎಂದು ಬದಲಾಯಿಸುತ್ತಾಳೆ. ನಂತರ ದಂಪತಿಗಳು ದಕ್ಷಿಣ ಕೊರಿಯಾದ ಪ್ರಸ್ತುತ ಗಿಮ್ಹೇ ಪ್ರದೇಶದಲ್ಲಿ ಕರಕ್ ರಾಜವಂಶವನ್ನು ಪ್ರಾರಂಭಿಸಿದರು. ಕೊರಿಯಾದ ಪುಸ್ತಕ ‘ಸಾಮ್ಗುಕ್ ಯೂಸಾ’ — ಪುಸ್ತಕದಲ್ಲಿ ಈ ಕಥೆಯ ಉಲ್ಲೇಖವಿದೆ. ರಾಜಕುಮಾರಿ ಪ್ರಶಂಸಿಸಿದ ‘ಆಯುಟಾ’ ಸಾಮ್ರಾಜ್ಯದ ಬಗ್ಗೆಯೂ ಒಂದು ಉಲ್ಲೇಖವಿದೆ.
ರಾಜ ದಂಪತಿಗಳು 150 ವರ್ಷಗಳ ಕಾಲ ಬದುಕಿದ್ದರು ಮತ್ತು ಅವರಿಗೆ 10 ಜನ ಗಂಡು ಮಕ್ಕಳಿದ್ದರು. ಭಾರತೀಯ ರಾಜಕುಮಾರಿಯ ಕಥೆ ದಂತಕಥೆ ಎಂದು ಹಲವರು ನಂಬಿದರೆ, ಕಿಮ್ ಬೈಂಗ್-ಮೊ ಆಯುಟಾ ಎಂಬ ಇತಿಹಾಸ ತಜ್ಞರು, ವಾಸ್ತವವಾಗಿ ಅದು ಅಯೋಧ್ಯೆ ಎಂದು ದೃಢ ಪಡಿಸಿದ್ದಾರೆ .
ಆದಾಗ್ಯೂ, ರಾಜಕುಮಾರಿಯ ಈ ಕಥೆ ನಿಜವೆಂದು ಸಾಬೀತುಪಡಿಸಲು ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಸಾಂಪ್ರದಾಯಿಕವಾಗಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಕ್ಕಳು ತಮ್ಮ ತಂದೆಯ ಉಪನಾಮವನ್ನು ತೆಗೆದುಕೊಳ್ಳುತ್ತಾರೆ. ಕಿಮ್ ಎನ್ನುವುದು ಕೊರಿಯಾದಲ್ಲಿ ಬಹಳ ಸಾಮಾನ್ಯವಾದ ತಂದೆಯ ಉಪನಾಮವಾಗಿದೆ.
ಆದರೆ ದಂತಕಥೆಯ ಪ್ರಕಾರ, ರಾಣಿ ಹಿಯೋ ಹ್ವಾಂಗ್-ಒಕೆ ತನ್ನ ಮಕ್ಕಳು ತನ್ನ ಉಪನಾಮವನ್ನು ಹೊಂದಿಲ್ಲ ಎಂದು ಅಸಮಾಧಾನಗೊಂಡಳು ಮತ್ತು ನಂತರ, ರಾಜನು ಅವರ ಇಬ್ಬರು ಗಂಡುಮಕ್ಕಳ ಹೆಸರಲ್ಲಿ ಹಿಯೋ ಉಪನಾಮ ಬಳಸಲು ಅನುಮತಿಸಿದನು.
2000 ರಲ್ಲಿ ಅಯೋಧ್ಯೆ ಮತ್ತು ಗಿಮ್ಹೆಯನ್ನು ಸಹೋದರಿ ನಗರಗಳಾಗಿ ಅಭಿವೃದ್ಧಿಪಡಿಸಲು ಮತ್ತು ರಾಣಿಯ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರತಿವರ್ಷ ರಾಣಿಯ ವಂಶವು ಅಯೋಧ್ಯೆಗೆ ತನ್ನ ತಾಯಿನಾಡಿನಲ್ಲಿ ರಾಜಕುಮಾರಿಗೆ ಗೌರವ ಸಲ್ಲಿಸಲು ಬರುತ್ತದೆ. ಎರಡು ವರ್ಷಗಳ ಹಿಂದೆ, ಕೊರಿಯಾದ ನಿಯೋಗವು ಸ್ಮಾರಕವನ್ನು ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಿಮ್ ಜಂಗ್-ಸೂಕ್ ಅವರು 2018 ರಲ್ಲಿ ಅಯೋಧ್ಯೆಯ ಕ್ವೀನ್ ಹುಹ್ ಪಾರ್ಕ್‌ನಲ್ಲಿ ರಾಣಿ ಸ್ಮಾರಕವನ್ನು ಉದ್ಘಾಟಿಸಿದ್ದರು