ಇಂಗ್ಲೆಂಡ್ – ಪಾಕಿಸ್ತಾನ ಟೆಸ್ಟ್ – ಮೊದಲ ದಿನದ ಸಂಜೆಯ ಆಟಕ್ಕೆ ಮಳೆ ಅಡ್ಡಿ
ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯದ ಮೊದಲ ದಿನದ ಸಂಜೆಯ ಆಟಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದೆ. ಮೊದಲ ದಿನದ ಟೀ ವಿರಾಮದ ವೇಳೆ ಪಂದ್ಯ ಸ್ಥಗಿತಗೊಂಡಿದ್ದು ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 139 ರನ್ ದಾಖಲಿಸಿದೆ.
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಪಾಕಿಸ್ತಾನದ ಲೆಕ್ಕಚಾರದಂತೆ ಉತ್ತಮ ಆರಂಭ ಕಾಣಲಿಲ್ಲ. ಇಂಗ್ಲೆಂಡ್ ತಂಡ ಆರಂಭದಲ್ಲೇ ಆಘಾತ ನೀಡಿತ್ತು. ಪಾಕ್‍ನ ಆರಂಭಿಕ ಅಬಿದ್ ಆಲಿ 16 ರನ್ ಗಳಿಸಿ ಔಟಾದ್ರೆ, ನಾಯಕ ಅಝರ್ ಆಲಿ ಶೂನ್ಯ ಸುತ್ತಿದ್ರು. ಇವರಿಬ್ಬರು ಕ್ರಮವಾಗಿ ಆರ್ಚರ್ ಮತ್ತು ವೋಕ್ಸ್ ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಆರಂಭಿಕ ಆಟಗಾರ ಶಾನ್ ಮಸೂದ್ ಅವರನ್ನು ಜೊತೆಸೇಇದ ಬಾಬರ್ ಅಝಾಮ್ ತಂಡಕ್ಕೆ ಆಧಾರವಾಗಿ ನಿಂತ್ರು. ಇಂಗ್ಲೆಂಡ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದ ಇವರಿಬ್ಬರು ಮೂರನೇ ವಿಕೆಟ್‍ಗೆ ಅಜೇಯ 96 ರನ್ ಪೇರಿಸಿದ್ದಾರೆ. ಶಾನ್ ಮಸೂದ್ ಅಜೇಯ 66 ರನ್ ಮತ್ತು ಬಾಬರ್ ಅಝಾಮ್ ಅಜೇಯ 69 ರನ್‍ಗಳೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.








