ವಿಧಾನಸೌಧ: ವಿಧಾನಮಂಡಲ ಅಧಿವೇಶನ ನಡೆಸುವ ವಿಚಾರವಾಗಿ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಮಾರ್ಚ್ ನಲ್ಲಿ ಅಧಿವೇಶನ ಮುಗಿದಿದೆ. ಸೆಪ್ಟಂಬರ್ ನಲ್ಲಿ ಅಧಿವೇಶನ ಮಾಡಬೇಕು. ಯಾವ ಸ್ಥಳದಲ್ಲಿ ಅಧಿವೇಶನ ನಡೆಸಬೇಕು ಎಂಬುದರ ಬಗ್ಗೆ ಅಧಿಕಾರಿಗಳ ತಂಡ ರಚಿಸಿ ಚರ್ಚೆ ನಡೆಸುತ್ತಿದ್ದೇವೆ. ನಾವು ಬೇರೆ ಸ್ಥಳಗಳಲ್ಲೂ ನೋಡಿದ್ದೇವೆ. ಅಸೆಂಬ್ಲಿ ಹಾಲ್ ನಲ್ಲಿ ವ್ಯವಸ್ಥೆ ಮಾಡಿಕೊಂಡು ನಡೆಸಬೇಕಿದೆ.
ಕಾನೂನು ಸಚಿವರು,ಸಿಎಸ್,ಪ್ರಮುಖರ ಜೊತೆ ಚರ್ಚೆ ನಡೆಸುತ್ತೇನೆ. ನಂತರ ಸ್ಥಳದ ಬಗ್ಗೆ ಅಂತಿಮಗೊಳಿಸುತ್ತೇವೆ. ಧಾನಸೌಧ ಬಿಟ್ಟು ಬೇರೆ ಕಡೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸೆಪ್ಟಂಬರ್ 23 ರೊಳಗೆ ಅಧಿವೇಶನ ನಡೆಸಬೇಕು. ಆರು ತಿಂಗಳ ಒಳಗೆ ಅಧಿವೇಶನ ನಡೆಸಬೇಕು. ಸಂಸತ್,ಬೇರೆ ರಾಜ್ಯಗಳ ಅಸೆಂಬ್ಲಿ ಕೂಡ ನಡೆಸಬೇಕಿದೆ. ನಿಯಮಗಳ ಪ್ರಕಾರ ನಡೆಸಬೇಕಿದೆ. ಈ ಎಲ್ಲಾ ಅಂಶಗಳನ್ನ ನೋಡಿ ನಿರ್ಧರಿಸುತ್ತೇವೆ” ಎಂದಿದ್ದಾರೆ.








