ಚಾಮರಾಜನಗರ: ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ 186 ನೌಕರರನ್ನು ಕಿಕ್ ಔಟ್ ಮಾಡಲಾಗಿದೆ. ಗುತ್ತಿಗೆ ನೌಕರರು, ಸಂಚಿತ ವೇತನಾಧಾರಿತ, ಅನುಕಂಪ ಆಧಾರಿತ ನೌಕರರನ್ನ ಪ್ರಾಧಿಕಾರ ಕೈಬಿಟ್ಟಿದೆ. ಇದೀಗ ಪ್ರಾಧಿಕಾರದ ನೆಡೆ ಖಂಡಿಸಿ ಹೋರಾಟ ಮಾಡಲು ಸಜ್ಜಾಗಿರುವ ಸಿಬ್ಬಂದಿಗಳು ಪೂರ್ವ ಭಾವಿ ಸಭೆ ನಡೆಸಿದ್ದಾರೆ. ಸರ್ಕಾರದ ಯಾವುದೇ ರೀತಿಯ ಸವಲತ್ತು ಗಳನ್ನು ಕಲ್ಪಿಸದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿರುವ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರದಿಂದಾಗಿ 10-15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ತೋಟಗಾರಿಕೆ, ದಾಸೋಹ ಭವನ,ಲಾಡು ವಿಭಾಗ, ಬಸ್ಸ್ ವಿಭಾಗ, ಉತ್ಸವ ವಿಭಾಗದ ನೌಕರ ಪರಿಸ್ಥಿತಿ ಸದ್ಯ ಅತಂತ್ರವಾಗಿದೆ. ಕಾರ್ಯದರ್ಶಿ ಜಯವಿಭವ ಸ್ವಾಮಿ ಯವರ ಮೌಖಿಕ ಆದೇಶದಿಂದ 186 ನೌಕರ ಕುಟುಂಬಸ್ಥರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಇನ್ನೂ ಪ್ರಾಧಿಕಾರದ ವಿರುದ್ಧ ಪ್ರಾಧಿಕಾರ ಬಗ್ಗು ಬಡಿಯುತ್ತಿದೆ ಎಂಬುದು ವಜಾಗೊಂಡ ನೌಕರರ ಆರೋಪವಾಗಿದೆ. ಮುಂದಿನ ಹೋರಾಟಕ್ಕೆ ಸಜ್ಜಾಗಲು ಮಲೆ ಮಹದೇಶ್ವರ ಸ್ವಾಮಿ ಪುಣ್ಯಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘ ನಿರ್ಧಾರ ಮಾಡಿದೆ. ಸರ್ಕಾರದ ಆದೇಶದಂತೆ ನೌಕರರಿಗೆ ಬರಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಪ್ರಾಧಿಕಾರದ ವಿರುದ್ದ ಪ್ರತಿಭಟನೆ ನಡೆಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...








