ಚಿಕ್ಕಮಗಳೂರು: ಕಳೆದೆರೆಡು ದಿನಗಳಿಂದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ವರುಣನ ರೌದ್ರಾವತಾರಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತ, ಮರ ಕುಸಿತ, ಮನೆಗಳಿಗೆ ಹಾನಿಯಾಗಿದೆ. ಇನ್ನೂ ಪ್ರತಿ ಬಾರಿ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾಗುತ್ತಲೇ ಇರುತ್ತೆ. ಇದೀಗ ಮತ್ತೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿರುವ ಚಾರ್ಮಾಡಿ ಘಾಟ್ ನ ಮೂರು ಕಡೆಗಳಲ್ಲಿ ಗುಡ್ಡ ಕುಸಿತವಾಗಿದ್ದು, ಸಂಚಾರವನ್ನ ಬಂದ್ ಮಾಡಲಾಗಿದೆ. ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡ ಕುಸಿದಿದ್ದು, ಜಿಲ್ಲಾಡಳಿತದಿಂದ ಮಣ್ಣು ತೆರವು ಕಾರ್ಯಾಚರಣೆ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ಮಣ್ಣು ತೆರವು ಕಾರ್ಯಾಚರನೆಯಲ್ಲಿ ಜೆಸಿಬಿಗಳನ್ನು ಬಳಸಿಕೊಳ್ಳಲಾಗಿದೆ. ಈಗಾಗಲೇ ಮಳೆಯಿಂದಾಗಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅನಾಹುತ ಸಂಭವಿಸಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಗಾಳಿ ಸಹಿತ ಭಾರೀ ಮಳೆಗೆ ಗುಡ್ಡ ಕುಸಿಯುತ್ತಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು, ಈಗಾಗಲೇ ಪ್ರವಾಹಕ್ಕೆ ಜಿಲ್ಲೆಯಲ್ಲಿ ಒಂದು ಬಲಿಯಾಗಿದೆ. ಇನ್ನೂ ಮಳೆ ಹೀಗೇ ಮುಂದುವರೆದಲ್ಲಿ ಪ್ರವಾಹ ಉಂಟಾಗಿ ಭಾರೀ ಪ್ರಮಾಣದ ತೊಂದರೆಗಳಾಗುವ ಸಾಧ್ಯತೆಯಿದೆ.
ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.
ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ. 28-08-2026 ರಂದು ನಗದು ಅಗತ್ಯವನ್ನು ಪೂರೈಸಲು...








