ಕರಾಚಿ: ಒಂದಲ್ಲ ಒಂದು ಕಾರಣಕ್ಕೆ ಪಾಕಿಸ್ತಾನದ ನ್ಯೂಸ್ ಚಾನೆಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಲೇ ಇರುತ್ತಿವೆ. ಹಾಗೇ ಈ ಬಾರಿ ಕೂಡ ಪಾಕ್ ನ್ಯೂಸ್ ಚಾನಲ್ ವೊಂದರ ಪ್ಯಾನಲ್ ಚರ್ಚೆ ವೇಳೆ ನಡೆದ ಸಣ್ಣ ಎಡವಟ್ಟಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ವೈರಲ್ ಆಗಿದೆ. ದುನ್ಯಾ ನ್ಯೂಸ್ ಎಂಬ ಸುದ್ದಿ ವಾಹಿನಿಯಲ್ಲಿ ಪ್ಯಾನಲ್ ಡಿಸ್ಕಶನ್ ನಡೆಯುತ್ತಿತ್ತು. ಈ ಲೈವ್ ಶೋದಲ್ಲಿ ಸ್ಯೇದಾ ಆಯೇಷಾ ನಾಜ್ ಎಂಬುವರು ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಹಾಗೇ ನಾಲ್ವರು ಅತಿಥಿಗಳು ಚರ್ಚೆಗೆ ಕುಳಿತಿದ್ದರು. ನಾಲ್ವರಲ್ಲಿ ಓರ್ವ ಅತಿಥಿ ಇರ್ಮಾನ್ ಖಾನ್ ವಿಚಾರವಾಗಿ ಮಾತನಾಡುತ್ತಿದ್ದರು. ಆದರೆ ಹಾಗೆ ಮಾತನಾಡುತ್ತ ಇದ್ದಂತೆ ಕುಳಿತಿದ್ದ ಕುರ್ಚಿ ಮುರಿದು ಹೋಗಿ ಅವರು ಕೆಳಗೆ ಬಿದ್ದರು. ಅದು ಲೈವ್ ನಲ್ಲಿ ಪ್ರಸಾರವಾಯಿತು. ಅವರ ಪಕ್ಕದಲ್ಲೇ ಕುಳಿತಿದ್ದ ಆಯಂಕರ್ ಅದನ್ನು ನೋಡಿ ಕ್ಷಣಕ್ಕೆ ಬ್ರೇಕ್ ಹೇಳಿದ್ದಾರೆ.
ಸದ್ಯ ಇದರ ಸಣ್ಣ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಸಿಕ್ಕಾಪಟೆ ನಗುತ್ತಿದ್ದಾರೆ.
https://twitter.com/nailainayat/status/1234203412859957248








