ADVERTISEMENT
Saturday, May 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೌಂಟ್ ಎವರೆಸ್ಟ್ ಆರೋಹಣದ ಸಾಹಸ ಹಾಗೂ ಜಾರ್ಜ್ ಮೆಲೋರಿಯ ನಿಗೂಢ ಅಂತರ್ಧಾನ

admin by admin
August 8, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮೌಂಟ್ ಎವರೆಸ್ಟ್ ಆರೋಹಣದ ಸಾಹಸ ಹಾಗೂ ಜಾರ್ಜ್ ಮೆಲೋರಿಯ ನಿಗೂಢ ಅಂತರ್ಧಾನ

ನೀವು ಎವರೆಸ್ಟ್ ಶಿಖರವನ್ನ ಮೊಟ್ಟ ಮೊದಲ ಬಾರಿಗೆ ಹತ್ತಿದ ತೇನ್ ಸಿಂಗ್ ಹಾಗೂ ಆತನ ತಂಡದ ಬಗ್ಗೆ ಕೇಳಿರುತ್ತೀರಿ. ಇವರು 1953ರ ಮೇನಲ್ಲಿ ಸುಮಾರು ಒಂಭತ್ತು ಕಿಲೋ ಮೀಟರ್ ನಷ್ಟು ಎತ್ತರವಿರೋ ಎವರೆಸ್ಟ್ ಶಿಖರವನ್ನ ಹತ್ತಿ ವಿಶ್ವ ದಾಖಲೆ ನಿರ್ಮಿಸಿದವರು. ಇವರಿಗೂ ಮುಂಚೆಯೇ ಈ ಶಿಖರವನ್ನ ಹತ್ತಲು ಸಾಕಷ್ಟು ಜನ ಪ್ರಯತ್ನಿಸಿದ್ದರಾದರೂ ಅವರು ತುದಿಯವರೆಗೂ ಹೋಗಿ ಬಂದಿರಲಿಲ್ಲ.

Related posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

May 23, 2026
‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

May 23, 2026

ಆದರೆ ತೇನ್ ಸಿಂಗ್ ಗು ಬಹಳ ಮುನ್ನವೇ ಎವರೆಸ್ಟನ್ನು ಹತ್ತಿರಬಹುದಾದ ವ್ಯಕ್ತಿಯೊಬ್ಬನ ಬಗ್ಗೆ ನಮ್ಮಲ್ಲಿ ಸಾಕಷ್ಟು ಜನಕ್ಕೆ ತಿಳಿದಿರಲಾರದು. ಅವನೇ ಇಂಗ್ಲೆಂಡಿನ ಜಾರ್ಜ್ ಮ್ಯಾಲೋರಿ ಎಂಬ ಹವ್ಯಾಸಿ ಮೌಂಟೇನಿಯರ್. ಈತ 1924 ರಲ್ಲಿ ತನ್ನ ಗೆಳೆಯ ಇರ್ವಿನ್ ಎಂಬುವವನೊಂದಿಗೆ ಎವರೆಸ್ಟ್ ಶಿಖರ ಹತ್ತುವ ಯೋಜನೆ ಹಾಕಿಕೊಳ್ತಾನೆ. ಇನ್ನೇನು ಎವರೆಸ್ಟ್ ಹತ್ತುವ ಪ್ರಯತ್ನದಲ್ಲಿದ್ದಾಗಲೇ ಮ್ಯಾಲೋರಿ ನಿಗೂಢವಾಗಿ ಕಣ್ಮರೆಯಾಗ್ತಾನೆ ! ಅವನ ಜತೆಯಿದ್ದ ಇರ್ವಿನ್ ಸಹ ನಾಪತ್ತೆಯಾಗ್ತಾನೆ !

ಮ್ಯಾಲೋರಿ ತನ್ನ ಜೀವಮಾನವಿಡೀ ಹಿಮಾಲಯದ ಶಿಖರಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವ. ಅಲ್ಲಿನ ಎವರೆಸ್ಟ್ ಹತ್ತುವ ಅವನ ಆಸೆ ಅವನ ಜೀವನದ ಬಹುದೊಡ್ಡ ಕನಸಾಗಿತ್ತು ! ಈ ದಿಸೆಯಲ್ಲಿ ಅವನು ಅನೇಕ ಪ್ರಯತ್ನಗಳನ್ನ ಮಾಡಿ ಸೋತಿದ್ದ. ಆದರೂ ಎದೆಗುಂದದೆ ಎವರೆಸ್ಟ್ ಹತ್ತುವ ಛಲ ಬೆಳೆಸಿಕೊಂಡು ಪ್ರತಿ ಬಾರಿಯೂ ಹೊಸ ಹುಮ್ಮಸ್ಸಿನೊಂದಿಗೆ ಯಾನ ಕೈಗೊಳ್ಳುತ್ತಿದ್ದ. 1924ರಲ್ಲಿ ತನ್ನ ಗೆಳೆಯ ಆಂಡ್ರೂ ಇರ್ವಿನ್ ನ ಜತೆ ಹೊಸ ಹುರುಪಿನಿಂದಲೇ ಎವರೆಸ್ಟ್ ನ ತುದಿ ತಲುಪಿದ್ದ ! ಆತ ಎವರೆಸ್ಟ್ ಹತ್ತಿ ಇಳಿಯುವಾಗ ಅಂತರ್ಧಾನನಾದನೋ. ಅಥವಾ ಹತ್ತುವಾಗಲೇ ಮಾಯವಾದನೋ ಎಂಬ ಗೊಂದಲದಲ್ಲೇ ಕಣ್ಮರೆಯಾಗಿ ಹೋದ.

ಹಾಗೆ ಕಣ್ಮರೆಯಾಗಿ ಹೋದವ ಭರ್ತಿ 75 ವರ್ಷಗಳ ಹುಡುಕಾಟದ ಬಳಿಕ ಅಂದರೆ ಸುಮಾರು ಮುಕ್ಕಾಲು ಶತಮಾನದ ಬಳಿಕ ಪುನಃ ದೊರೆತದ್ದೆ ಪವಾಡ. ಮುಂದಿನ ಪರ್ವತಯಾನಿಗಳಿಗೆ ಈ ಮೂಲಕ ದಂತಕತೆಯಾಗಿ ಹೋದ ಜಾರ್ಜ್ ಮ್ಯಾಲೋರಿ ಹಾಗೂ ಆಂಡ್ರೂ ಇರ್ವಿನ್ನರ ಕಣ್ಮರೆಯು ಹಿಮಾಲಯದ ರೋಚಕ ಕತೆಗಳಲ್ಲಿ ಮುಖ್ಯವಾದ ಘಟನೆ.

ಜಾರ್ಜ್ ಮ್ಯಾಲೋರಿ ಜನಿಸಿದ್ದು ಇಂಗ್ಲೆಂಡಿನ ಚೆಶೈರ್ ಎಂಬಲ್ಲಿ. ಜನ್ಮ ದಿನಾಂಕ 1886 ರ ಜೂನ್ ಮಾಹೆ. ಚಿಕ್ಕಂದಿನಿಂದಲೂ ಪರ್ವತಾರೋಹಣದೆಡೆಗೆ ಆಸಕ್ತಿ ಇದ್ದ ಮ್ಯಾಲೋರಿಗೆ ಹಿಮಾಲಯದ ಶಿಖರಗಳನ್ನ ಏರುವ ತವಕ ಇತ್ತು. ಅದರಲ್ಲು ಎವರೆಸ್ಟ್ ಎಂಬ ಸರ್ವ ದೈತ್ಯ ಶಿಖರದ ತುದಿ ತಲುಪಿ ಕೇಕೆ ಹಾಕಿ ಬರುವ ಉನ್ಮಾದವಿತ್ತು. 1910 ರಿಂದಲೇ ಆತ ಪರ್ವತಾರೋಹಿಗಳ ಜತೆ ಏಷ್ಯಾದ ಕೆಲ ಶಿಖರದ ತಪ್ಪಲುಗಳನ್ನ ಏರಲು ಶುರು ಮಾಡಿದ್ದ. 1921 ರಲ್ಲಿ ಮೊದಲ ಬಾರಿಗೆ ಮ್ಯಾಲೋರಿ ಹಿಮಾಲಯದ ಎವರೆಸ್ಟ್ ಹತ್ತಲು ಯತ್ನಿಸಿದ. ಆದರೆ ಪ್ರಯತ್ನದಲ್ಲಿ ಸೋತ. 1922 ರಲ್ಲು ಸಹ ಎವರೆಸ್ಟ್ ಹತ್ತಿದ. ಆದರೆ ತುದಿ ಮುಟ್ಟದೆ ಹಿಂದಿರುಗಿದ. ಇಷ್ಟಾದರೂ ಅವನ ಆತ್ಮವಿಶ್ವಾಸ ಮಾತ್ರ ಕುಗ್ಗಿರಲಿಲ್ಲ.

1924 ರಲ್ಲಿ ಮ್ಯಾಲೋರಿ ತನ್ನ ಸ್ನೇಹಿತ ಇರ್ವಿನ್ ನ ಜತೆ ಎವರೆಸ್ಟ್ ಹತ್ತುವ ಯೋಜನೆ ಕೈಗೊಂಡ. ಆದರೆ ತನ್ನ ಜೀವನದ ಕೊನೇ ಯಾನ ಎಂಬ ಸಣ್ಣ ಸುಳಿವೂ ಸಹ ಅವನಿಗಾಗಲೀ ಇರ್ವಿನ್ ಗಾಗಲಿ ಇರಲಿಲ್ಲ. ಈ ಬಾರಿ ಅವರ ಜತೆ ಇನ್ನೂ ಒಬ್ಬ ಇದ್ದ. ಅವನೆ ನೋಲ್ ಒಡೆಲ್ ಎಂಬ ಭೂಗರ್ಭಶಾಸ್ತ್ರಜ್ಞ. ಮೆಲೋರಿಯ ಅಂತರ್ಧಾನದ ಈ ಪ್ರಕರಣದಲ್ಲಿ ಈ ನೋಲ್ ಒಡೆಲ್ ನ ಹೆಸರನ್ನ ಉಲ್ಲೇಖಿಸುವುದು ಅತಿ ಮುಖ್ಯ. ಏಕೆಂದರೆ ಯಾನದ ಸಂದರ್ಭದಲ್ಲಿ ಐದನೇ ಕ್ಯಾಂಪಿನಿಂದ ಮ್ಯಾಲೋರಿ ಹಾಗೂ ಇರ್ವಿನ್ ರನ್ನ ಕೊನೆಯ ಬಾರಿ ನೋಡಿದ್ದ ಏಕೈಕ ವ್ಯಕ್ತಿಯೆಂದರೆ ಅದು ಈ ಒಡೆಲ್ ಮಾತ್ರ.

ಕೊನೆಯ ಬಾರಿ ಒಡೆಲ್ ಗೆ ಅವರಿಬ್ಬರು ಕಂಡದ್ದು ಬೆಟ್ಟದ ಇಳಿಜಾರಿನ ಎರಡನೇ ಹಂತದಲ್ಲಿ. ಅಲ್ಲಿ ಇಳಿಜಾರಿನಲ್ಲಿ ಕಪ್ಪು ಚುಕ್ಕೆಗಳಂತೆ ಒಬ್ಬರ ಕೆಳಗೆ ಒಬ್ಬರು ಹತ್ತುತ್ತಿದ್ದುದನ್ನ ತಾನು ಕಂಡೆನೆಂದೂ. ಮೋಡ ಸರಿದು ವೀಕ್ಷಣೆಗೆ ಅನುಕೂಲವಾದಾಗ ಇಬ್ಬರನ್ನೂ ಐದು ನಿಮಿಷಗಳವರೆಗೂ ಗಮನಿಸಿದೆ ಎಂದೂ ಒಡೆಲ್ ತನ್ನ ಡೈರಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾನೆ. ಮೋಡ ಕವಿದ ಬಳಿಕ ಮಂಜು ಮುಸುಕಿ ತನಗೆ ಏನೂ ಸಹ ಕಾಣದಾಯ್ತೆಂದೂ. ನಂತರ ಸ್ವಲ್ಪ ಸಮಯದ ಬಳಿಕ ಅವರು ನನಗೆ ಅಲ್ಲಿ ಪುನಃ ಕಾಣಿಸಲೇ ಇಲ್ಲ ಎಂದು ಆತ ಬರೆದಿದ್ದ.

ಹೀಗೆ ಎಷ್ಟು ಹೊತ್ತಾದರೂ ಅವರಿಬ್ಬರೂ ಕಾಣದಾದಾಗ ಒಡೆಲ್ ಒಬ್ಬನೇ ಅಲ್ಲಿಗೆ ಹೋಗಿ ಸುಮಾರು 27 ಸಾವಿರ ಅಡಿಯವರೆಗೂ ಹತ್ತಿ ನೋಡಿ ಅವರನ್ನ ಹುಡುಕಾಡಿದ. ಆದರೆ ಕಣ್ಮರೆಯಾದ ಸ್ನೇಹಿತರ ಸಣ್ಣ ಸುಳಿವೂ ಸಹ ಅವನಿಗೆ ಸಿಗಲಿಲ್ಲ. ಆಗ ಹತಾಶನಾಗಿ ಹಿಂದಿರುಗಿದ ಒಡೆಲ್ ಹೊರ ಜಗತ್ತಿಗೆ ಅವರು ಕಣ್ಮರೆಯಾದ ಸುದ್ದಿಯನ್ನ ತಿಳಿಸಿದ. ಇದಾದ ಬಳಿಕ ಈ ಸುದ್ದಿ ಆಗಿನ ಎಲ್ಲಾ ರಾಷ್ಟ್ರೀಯ ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲು ಬಿತ್ತರವಾಯ್ತು. ಆನಂತರ ಮ್ಯಾಲೋರಿ ಹಾಗೂ ಅವರೊಂದಿಗಿದ್ದ ವಸ್ತುಗಳ ಶೋಧದ ಅನೇಕ ಪ್ರಯತ್ನಗಳು ಜರುಗಿದವು. ಆದರೆ ಯಾವ ಹುಡುಕಾಟಗಳೂ ಸಹ ಅವರ ಬಗ್ಗೆ ಸುಳಿವು ಕೊಡಲಿಲ್ಲ.

ಈ ಮಧ್ಯೆ ಒಡೆಲ್ ತನ್ನ ಡೈರಿಯಲ್ಲಿ ಅವರಿಬ್ಬರನ್ನ ತಾನು ಕೊನೆಯ ಬಾರಿಗೆ ಕಂಡಿದ್ದರ ಬಗ್ಗೆ ಬರೆದಿದ್ದ ಸಾಲುಗಳು ಮುಂದೆ ಅನೇಕ ವಿವಾದಗಳನ್ನ ಎಬ್ಬಿಸಿದವು. ಅವನು ಅವರಿಬ್ಬರೂ ಎರಡನೆ ಹಂತದಲ್ಲಿದ್ದಾಗ ನೋಡಿದೆ ಎಂದು ಬರೆದಿದ್ದ. ಅವರು ಒಂದು ವೇಳೆ ಹತ್ತಿ ವಾಪಸ್ ಇಳಿಯುವಾಗ ಮಾಯವಾದರೋ? ಅಥವಾ ಹತ್ತುವಾಗಲೇ ಮಾಯವಾದರೋ? ಇಳಿಯುವಾಗ ಮಾಯವಾಗಿದ್ದರೆ ಎವರೆಸ್ಟ್ ಹತ್ತಿದ ಮೊದಲಿಗರೆ ಅವರಾಗುತ್ತಾರಲ್ಲವೆ? ಹೀಗೆ ಪರ್ವತಾರೋಹಣದ ವಲಯದಲ್ಲಿ ಭಾರೀ ಚರ್ಚೆಗಳು ನಡೆದವು.

1932, 40ರಲ್ಲು ಅವರ ಹುಡುಕಾಟಗಳು ಜರುಗಿದವಾದರೂ ಎಷ್ಟೇ ಹುಡುಕಿದರೂ ಯಾವ ಪ್ರತಿಫಲವೂ ಸಿಗಲಿಲ್ಲ. 1999 ರಲ್ಲಿ BBC ಯು ‘ಮೆಲೋರಿ, ಇರ್ವಿನ್ ಸಂಶೋಧನ ತಂಡ’ ಎಂಬ ತಂಡವೊಂದನ್ನ ರಚಿಸಿ ಎವರೆಸ್ಟ್ ನ ಮೂಲೆ ಮೂಲೆಯನ್ನೂ ಜಾಲಾಡಲು ತಂಡವನ್ನ ಅಟ್ಟಿತು. 1999 ರ ಮೇ 1 ನೇ ತಾರೀಕು ಆವಿಸ್ಮರಣೀಯವಾದ ದಿನವೆಂದೆ ಹೇಳಬೇಕು ! ಆ ದಿನ BBC ತಂಡದ ನಾಯಕ ಎರಿಕ್ ಸಿಮನ್ಸನ್ ಹಾಗೂ ಅವನ ಸಹೋದ್ಯೋಗಿಗಳು ಅತ್ಯಾಧುನಿಕ ಶೋಧದ ಸಲಕರಣೆಗಳ ಸಹಾಯದಿಂದ ಎವರೆಸ್ಟ್ ನ ಮಂಜಿನೋಪಾದಿಯಲ್ಲಿ ಕೊನೆಗೂ ಮೆಲೋರಿಯ ಮೃತದೇಹವನ್ನ ಪತ್ತೆ ಮಾಡಿಯೇ ಬಿಟ್ಟರು.

ಈ ಮಹೋನ್ನತ ಪತ್ತೆಯ ವಾರ್ತೆ ಜಗತ್ತನೇ ದಂಗು ಬಡಿಸಿತು. ಹಿಮಾಲಯದ ಅತಿ ಶೈತ್ಯದಲ್ಲಿ ಅಲ್ಲಿ ಮಂಜಿನಡಿ ನೈಸರ್ಗಿಜವಾಗಿ ಸಂಸ್ಕರಿಸಲ್ಪಟ್ಟ ಮೆಲೋರಿಯ ದೇಹ ಸ್ವಲ್ಪವೂ ಕೆಡದೆ ಸಂರಕ್ಷಿಸಲ್ಪಟ್ಟಿತ್ತು ! ಅವನು ಹೇಗೆ ಸತ್ತಿದ್ದನೋ ಹಾಗೆಯೇ ದೊರೆತಿದ್ದ. ಆತನ ದೇಹ ಸಂಪೂರ್ಣ ಸ್ಥಿತಿಯಲ್ಲಿ ದೊರೆತಿದ್ದು ಅದು ಕೆಳಮುಖವಾಗಿ ಬಿದ್ದಿತ್ತು ! ಆತನ ಮುರಿದ ಕಾಲಿನ ಮೂಳೆಗಳು ಆತ ಜಾರಿ ಕೆಳಕ್ಕೆ ಬಿದ್ದು ಸತ್ತಿದ್ದಿರಬಹುದೆಂಬುದನ್ನ ಖಚಿತಪಡಿಸಿದವು. ಆದರೆ ಅವನ ಜತೆಗಾರ ಇರ್ವಿನ್ ನ ಶವ ಸಿಗಲಿಲ್ಲ. ಆದರೆ ಮೆಲೋರಿಯ ಶವ ಸಿಕ್ಕ ಜಾಗದಿಂದ ಸುಮಾರು 700 ಅಡಿ ಕೆಳಗೆ ಇರ್ವಿನ್ ಬಳಸಿದ್ದ ಪಿಕಾಸಿ ಮಾತ್ರ ಸಿಕ್ಕಿತು.

ಒಡೆಲ್ ಅಂದು ತಾನು ಮೆಲೋರಿಯನ್ನ ಕಂಡೆ ಎಂದಿದ್ದ ಜಾಗದಿಂದ ಸಾವಿರಾರು ಅಡಿಗಳಷ್ಟು ಕೆಳಗೆ ಮೆಲೋರಿಯ ಶವ ಸಿಕ್ಕಿತ್ತು ! ಅವನು ಒಡೆಲ್ ಗಮನಿಸಿದ್ದ ಪ್ರದೇಶದಲ್ಲೇ ಸತ್ತು ನಂತರ ಅವನ ದೇಹ ಅಲ್ಲಿನ ಒತ್ತಡಗಳಿಂದ ಕೆಳಗೆ ನೂಕಲ್ಪಟ್ಟಿತೊ ? ಅಥವಾ ಶವ ಸಿಕ್ಕ ಜಾಗದಲ್ಲೇ ಅವನು ಸತ್ತು ಅಲ್ಲೇ 75 ವರ್ಷಗಳ ಕಾಲ ಅನಾಥವಾಗಿ ಬಿದ್ದಿದ್ದನೊ ಎಂಬ ಗೊಂದಲಗಳು ಹಾಗೆಯೇ ಉಳಿದವು.

ಈ ಕುರಿತು ಎಡ್ಮಂಡ್ ಹಿಲರಿ ಹೇಳಿದ್ದು ಹೀಗೆ
‘ಮೆಲೋರಿ ನಮಗಿಂತ ಮೊದಲೇ ಎವರೆಸ್ಟ್ ಹತ್ತಿದ್ದರೆ ಇದು ನಿಜಕ್ಕು ಶ್ಲಾಘನೀಯ ಸಂಗತಿ ! ಆತ ನಮ್ಮಂಥ ಅನೇಕ ಆರೋಹಿಗಳಿಗೆ ಸ್ಫೂರ್ತಿ. ಆದರೆ ಆತ ಹತ್ತಿರುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಒಡೆಲ್ ಆತನನ್ನ ಕೊನೆಯ ಬಾರಿ ಗಮನಿಸಿದ ಜಾಗದಿಂದ ಎವರೆಸ್ಟ್ ಹತ್ತೋದು ಬಹು ಭೀಕರ ಸವಾಲು. ಅಲ್ಲದೆ ಎವರೆಸ್ಟ್ ಹತ್ತುವಷ್ಟೇ ಇಳಿಯುವುದೂ ಸಹ ಅತಿ ಪ್ರಯಾಸದ ಕೆಲಸ. ಒಟ್ಟಾರೆ ಮುಕ್ಕಾಲು ಶತಮಾನದ ಬಳಿಕ ದೊರೆತ ಮೆಲೋರಿ ಇಂದಿನ ಅನೇಕ ಪರ್ವತಾರೋಹಿಗಳಿಗು ಸದಾ ಮಾದರಿಯಾಗಿ ನಿಲ್ಲುತ್ತಾನೆಂಬುದು ಮಾತ್ರ ಸತ್ಯ.

ಸಂಗ್ರಹ ಲೇಖನ:-
-ಇಂಧೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)

Tags: adventure of Mount EverestGeorge MelorMount Everestworld record
ShareTweetSendShare
Join us on:

Related Posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

by Shwetha
May 23, 2026
0

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಸಚಿವಾಕಾಂಕ್ಷಿ ಶಾಸಕರು ಹಾಗೂ ಹಾಲಿ ಸಚಿವರು ದೆಹಲಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್...

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

by Shwetha
May 23, 2026
0

ಸೋಶಿಯಲ್ ಮೀಡಿಯಾದಲ್ಲಿ ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಭಾರೀ ಟ್ರೆಂಡ್ ಸೃಷ್ಟಿಸಿದೆ. ಕೆಲ ಯುವ ವಿಮರ್ಶಕರನ್ನು ಉದ್ದೇಶಿಸಿ CJI ನೀಡಿದ್ದ ‘ಕಾಕ್ರೋಚ್’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ...

ಮಂತ್ರಿ ಆಗೋಕೆ ₹200 ಕೋಟಿಯ ಬೇಡಿಕೆ – ಛಲವಾದಿ ನಾರಾಯಣಸ್ವಾಮಿ ಸ್ಫೋಟಕ ಆರೋಪ

ಮನೆ ನಿರ್ಮಿಸಲು ಜಮೀನು ಪಡೆದು ಸ್ಟೇಡಿಯಂ ಕಟ್ಟುವುದು ಎಷ್ಟು ಸರಿ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

by Shwetha
May 23, 2026
0

ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ...

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

by Shwetha
May 23, 2026
0

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ, ತನ್ನ ಸಚಿವ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯದ ಮಂತ್ರ...

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

by Shwetha
May 23, 2026
0

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram