ನವದೆಹಲಿ: ಬರುವ ಭಾನುವಾರ ನಾನು ನನ್ನ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಹಾಗಾದ್ರೆ ಮೋದಿ ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳ್ತಾರಾ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡಿದ್ದವು. ಇದಕ್ಕೆ ಅವರೇ ಉತ್ತರ ಕೊಟ್ಟಿದ್ದು, ಸಾಧನ ಮಹಿಳೆಯರಿಗೆ ಮೀಸಲಾಗಿಡುವ ಕಾರಣಕ್ಕೆ ನಾನು ಮಾ.8ರಂದು ಸೋಷಿಯಲ್ ಮೀಡಿಯಾ ಉಪಯೋಗಿಸುತ್ತಿಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿಯವರ ಈ ಹಿಂದಿನ ಟ್ವೀಟ್ ಗೆ ಟಾಂಗ್ ನೀಡಿದ್ದ ರಾಹುಲ್ ಗಾಂಧಿ ಈಗಿನ ಟ್ವೀಟ್ ಗೆ ಕೊರೊನಾ ವೈರಸ್ ಉಲ್ಲೇಖಿಸಿ ಟಕ್ಕರ್ ನೀಡಿದ್ದಾರೆ.
“ಪ್ರೀತಿಯ ಪ್ರಧಾನಿ ಮೋದಿಯವರೇ, ಇಡೀ ಭಾರತಕ್ಕೆ ಕೊರೊನಾ ವೈರಸ್ ನಂತಹ ತುರ್ತು ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಮುಂದಿಟ್ಟುಕೊಂಡು ತಮಾಷೆ ಮಾಡುತ್ತ, ಆಟವಾಡುತ್ತ ಸಮಯ ಹಾಳು ಮಾಡಬೇಡಿ. ಭಾರತದಲ್ಲಿ ಕೊರೊನಾ ವೈರಸ್ ತಡೆ, ನಿಯಂತ್ರಣದ ಬಗ್ಗೆ ಗಮನಹರಿಸಿ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.








