ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲಾ ಬಾಂಗ್ಲಾದೇಶಿಗರೂ ಭಾರತೀಯರೇ, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಬಂಗಾಳದ ಕಾಲಿಯಾಗಂಜ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ ಆಗಿದ್ದು, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ. ನೀವು ಹೊಸದಾಗಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸಿಎಎ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು, ಬಂಗಾಳದಲ್ಲಿ ಹಲವು ವರ್ಷಗಳಿಂದ ನೆಲೆಸಿರುವವ ಅವರು ಭಾರತೀಯರೇ ಆಗಿದ್ದಾರೆ. ಅವರಿಗೆಲ್ಲರಿಗೂ ಪೌರತ್ವ ದೊರೆತಿದ್ದು, ಈಗಾಗಲೇ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಕೂಡ ಮಾಡಿದ್ದು, ಈಗ ಅವರು ಪೌರತ್ವ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ ದೀದಿ, ಪಶ್ಚಿಮ ಬಂಗಾಳವನ್ನು ಮತ್ತೊಂದು ದೆಹಲಿ ಅಥವಾ ಉತ್ತರ ಪ್ರದೇಶವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.