ಬೆಳಗಾವಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಪರಿಣಾಮ ಬೆಳಗಾವಿಯ ಜಿಲ್ಲೆಯಲ್ಲಿನ ಡ್ಯಾಂ ಹಾಗೂ ಫಾಲ್ಸ್ಗಳು ಉಕ್ಕಿ ಹರಿಯುತ್ತಿವೆ. ಈ ರೀತಿ ಆದರೂ ತುಂಬಿ ಹರಿಯುವ ನೀರಿನಲ್ಲಿ ಯುವಕರು ತಮ್ಮ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ದೃಷ್ಯ ಕಂಡುಬಂದಿದೆ. ಒಂದೆಡೆ ಭೋರ್ಗರೆಯುತ್ತಾ ಧುಮ್ಮಿಕ್ಕಿತ್ತಿರುವ ಜಲಪಾತ, ರಭಸವಾಗಿ ಹರಿಯುವ ನದಿ ನೀರು ನೋಡಿದರೇನೆ ಮೈ ಝುಮ್ ಎನ್ನುತ್ತೆ, ನೀರಿನ ರೌದ್ರಸ್ವರೂಪ ಸದ್ದು ಕೇಳಿದ್ರೇನೆ ಮೈ ನಡುಗುತ್ತೆ. ಅಂತದ್ರಲ್ಲಿ ಕೆಲ ಯುವಕರು ಮಾತ್ರ ಇದಕ್ಕೆ ಕ್ಯಾರೇ ಅನ್ನದೇ ಬೆಳಗಾವಿ ಸಮೀಪದಲ್ಲಿರುವ ಕೀತ್ವಾಡ ಗ್ರಾಮದಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನದಿ ನೀರಿನಲ್ಲಿ ಮಳೆಯ ಮಧ್ಯೆಯೇ ಮೋಜು ಮಸ್ತಿ ಮಾಡಿದ್ದಾರೆ. ಜಿಲ್ಲಾಡಳಿತ ನದಿ ಹಾಗೂ ಡ್ಯಾಂ ಸಮೀಪ ಸುಳಿಯದಂತೆ, ಜನರಿಗೆ ಎಚ್ಚರಿಕೆಯಿಂದ ಇರುವಂತೆ ಖಡಕ್ ಸೂಚನೆ ನೀಡಿದ್ರೂ ಯುವಕರು ಮಾತ್ರ ತಮ್ಮ ಜೀವವನ್ನೂ ಲೆಕ್ಕಿಸಿದೇ ರಭಸವಾಗಿ ಹರಿದ ನದಿ ನೀರಿನಲ್ಲಿ ಈಜಾಡಿ ಹುಡುಗಾಟಿಕೆ ಪ್ರದರ್ಶಿಸಿದ್ದಾರೆ.
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








