ಶಿವಮೊಗ್ಗ : ಶಿವಮೊಗ್ಗ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಹಳ್ಳ ಕೊಳ್ಳಗಳು, ನದಿಗಳು ಮೈದುಂಬಿ ಹರಿಯುತ್ತಿವೆ. ತೀರ್ಥಹಳ್ಳಿಯ ತುಂಗಾ ನದಿಯೂ ಸಹ ಮೈದುಂಬಿ ಹರಿಯುತ್ತಿದ್ದು, ನದಿ ಮಧ್ಯದಲ್ಲಿನ ರಾಮ ಮಂಟಪ ಮುಳುಗಿ ಹೋಗಿದೆ. ಪಕ್ಕದ ಭತ್ತದ ಜಮೀನಿಗೂ ನೀರು ನುಗ್ಗಿ ಸಂಪೂರ್ಣ ಬೆಳೆನಾಶವಾಗಿದೆ. ತುಂಗಾ ನದಿಯಲ್ಲಿ ಒಳ ಹರಿವು ದಿನೇ ದಿನೇ ಹೆಚ್ಚುತ್ತಲೇ ಇದ್ದು, ಮತ್ತೊಂದೆಡೆ ವರುಣ ಶಾಂತನಾಗುವ ಲಕ್ಷಣಗಳು ಕಾಣುತ್ತಿಲ್ಲ.
ಇತ್ತ ಮಹಾಮಳೆಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಒಂದೆಡೆ ಜಮೀನಿಗೆ ನುಗ್ಗಿ ಸಂಪೂರ್ಣ ಬೆಳೆನಾಶವಾಗಿ ರೈತರು ಕಂಗಾಲಾಗಿದ್ರೆ, ಮತ್ತೊಂದೆಡೆ ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿ ನದಿ ಪಾತ್ರದ ಜನರು ಕಾಲ ಕಳೆಯುವಂತಾಗಿದೆ. ಇನ್ನೂ ಈಗಲೂ ಸಹ ತೀರ್ಥಹಳ್ಳಿ ಹೊಸನಗರ ಸಾಗರ ಶಿವಮೊಗ್ಗ ಸೇರಿದಂತೆ ಅತಿ ಹೆಚ್ಚು ಮಳೆಯಾಗುತ್ತಿದೆ.








