ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾಸುರ ಅಬ್ಬರಿಸುತ್ತಿದ್ದು, ಹೆಮ್ಮಾರಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಏತನ್ಮಧ್ಯೆ ಕೊರೊನಾ ಸೇವೆಗಾಗಿ ಸ್ಥಳೀಯ ನಿವಾಸಿಗಳು ಸ್ವಯಂಪ್ರೇರಿತರಾಗಿ ಮುಂದಾಗಿದ್ದು, ಶಾರದಾದೇವಿನಗರದ ಸ್ಥಳೀಯ ನಿವಾಸಿಗಳೇ ಸೇರಿಕೊಂಡು ಕೊರೊನಾ ಕಾರ್ಯ ಪಡೆ ರಚನೆ ಮಾಡಿದ್ದಾರೆ.
ವಾರ್ಡ್ ನಂ 45 ರ ನಿವಾಸಿಗಳು ಈ ಸ್ವಯಂಪ್ರೇರಿತ ಕಾರ್ಯ ಪಡೆ ರಚನೆ ಮಾಡಿದ್ದು, ಈ ಕಾರ್ಯಪಡೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ಹರೀಶ್ ಸೇರಿದಂತೆ ಕಾರ್ಯಪಡೆ ಸದಸ್ಯರು ಭಾಗಿಯಾಗಿದ್ದರು.









