ಹಾವೇರಿ: 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದ್ದು, ಹಲವರ ಮನೆಯಲ್ಲಿ ಸಂಭ್ರಮಾಚರಣೆ ಮನೆ ಮಾಡಿದ್ದರೆ , ಇನ್ನೂ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿ ಬೇಸರಗೊಂಡಿದ್ದಾರೆ. ಆದ್ರೆ ಇವರಲ್ಲಿ ಕೆಲವರು ಮುಂದಿನ ಸಲ ಪರೀಕ್ಷೆ ಪಾಸ್ ಮಾಡಿಕೊಂಡರೆ ಆಯಿತು ಬಿಡು ಎಂಬ ಹುಮ್ಮಸ್ಸು ಹೊಂದಿದ್ದರೆ , ಇನ್ನೂ ಕೆಲ ವಿದ್ಯಾರ್ಥಿಗಳು ದುಡುಕಿ ಕೆಟ್ಟ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಉಂಟು . ಯಾಕೆಂದರೆ ಪ್ರತಿ ಬಾರಿ ವಿದ್ಯಾರ್ಥಿಗಳು ಫೇಲ್ ಆದಂತಹ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಅದರಂತೆ ಈ ಬಾರಿಯೂ ಕೆಲವರ ಮನೆಯಲ್ಲಿ ಸಂಭ್ರಮವಿದ್ರೆ ಇನ್ನೂ ಕೆಲವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿಬಿಟ್ಟಿದೆ.
ಹೌದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಹಾವೇರಿ ನಗರದ ದ್ಯಾಮವ್ವನಗುಡಿ ಓಣಿಯಲ್ಲಿ ನಡೆದಿದೆ. ವೈಷ್ಣವಿ ರಿತ್ತಿ 16 ವರ್ಷ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಗಣಿತ ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಬೇಸತ್ತು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿ ಮೃತದೇಹ ಜಿಲ್ಲಾಸ್ಪತ್ರೆಯ ಶವಾರಕ್ಕೆ ರವಾನೆ ಮಾಡಲಾಗಿದೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!
ಇದು ಬರೀ ಒಂದು ಫುಟ್‍ಬಾಲ್ ಕಥೆಯಲ್ಲ..! ಒಬ್ಬ ಕ್ರಾಂತಿಕಾರಿ ಕಾಲ್ಚೆಂಡು ಆಟಗಾರನ ಬದುಕಿನ ಯಾನ. ಆಟದ ಜೊತೆಗೆ ವರ್ಣಭೇದ ನೀತಿಯ ವಿರುದ್ದ ಹೋರಾಡುತ್ತಿರುವ ಧೀರ ಸೇನಾನಿಯ ಬದುಕಿನ...








