ಐಸಿಸಿ ಅಂಪೈರ್ ಆಗಿ ಬಡ್ತಿ ಪಡೆದ ಕೇರಳದ ಅನಂತ ಪದ್ಮನಾಭನ್
ಕೇರಳದ ಮಾಜಿ ಲೆಗ್ ಸ್ಪಿನ್ನರ್ ಹಾಗೂ ದೇಸಿ ಅಂಪೈರ್ ಅನಂತಪದ್ಮನಾಭನ್ ಅವರು ಐಸಿಸಿ ಅಂಪೈರ್ ಆಗಿ ಬಡ್ತಿ ಪಡೆದುಕೊಂಡಿದ್ದಾರೆ.
ಈ ಮೂಲಕ ಅಂತಾರಾಷ್ಟ್ರೀಯ ಅಂಪೈರ್ ಪ್ಯಾನೆಲ್ ನಲ್ಲಿ ಸದ್ಯ ನಾಲ್ಕನೇ ಅಂಪೈರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಭಾರತದ ನಿತಿನ್ ಮೇನನ್ ಅವರು ಐಸಿಸಿ ಎಲೈಟ್ ಪ್ಯಾನೆಲ್‍ಗೆ ನೇಮಕವಾಗಿದ್ದಾರೆ. ಹೀಗಾಗಿ ಅವರ ಸ್ಥಾನವನ್ನು ಅನಂತಪದ್ಮನಾಭನ್ ಅವರು ತುಂಬಿದ್ದಾರೆ.
ಸದ್ಯ ಅಂತಾರಾಷ್ಟ್ರೀಯ ಅಂಪೈರ್ ಲೀಸ್ಟ್ ನಲ್ಲಿ ಭಾರತದ ಚೆಟ್ಟತೋಡಿ ಶಂಶುದ್ದೀನ್, ಅನಿಲ್ ಚೌಧರಿ ಮತ್ತು ವೀರೇಂದ್ರ ಶರ್ಮಾ ಅವರಿದ್ದಾರೆ.
ಅನಂತ ಪದ್ಮನಾಭನ್ ಅವರು ದೇಸಿ ಮತ್ತು ಐಪಿಎಲ್ ಟೂರ್ನಿಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕೇರಳ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದ ಅನಂತಪದ್ಮನಾಭನ್ ಅವರು ಲೆಗ್ ಸ್ಪಿನ್ ಬೌಲರ್. ಕೇರಳ ಪರ 105 ಪಂದ್ಯಗಳನ್ನು ಆಡಿದ್ದರು. 1988ರಿಂದ 2004ರವರೆಗೆ ದೇಸಿ ಕ್ರಿಕೆಟ್ ನಲ್ಲಿದ್ದ ಅನಂತಪದ್ಮನಾಭನ್ ಅವರು ನಂತರ ಅಂಪೈರ್ ತರಬೇತಿ ಪಡೆದು ಅಂಪೈರಿಂಗ್ ಮಾಡುತ್ತಿದ್ದಾರೆ. ಕೇರಳ ಪರ 200 ವಿಕೆಟ್ ಮತ್ತು 2000 ರನ್ ದಾಖಲಿಸಿದ್ದ ಆಟಗಾರ ಎಂಬ ಹೆಗ್ಗಳಿಕೆಯೂ ಅವರಿಗಿದೆ.








