ಭಾರತದಲ್ಲಿ ಆತಂಕಕ್ಕೆ ಕಾರಣವಾಗುತ್ತಿರುವ ಕೋವಿಡ್-19 ಪ್ರಕರಣಗಳ ದೈನಂದಿನ ಏರಿಕೆ
ಹೊಸದಿಲ್ಲಿ, ಅಗಸ್ಟ್ 11: ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ ಕೊರೋನವೈರಸ್ ಸೋಂಕು ತೀವ್ರವಾಗಿ ಹರಡುತ್ತಿದ್ದು, ಕೋವಿಡ್ -19 ಹೊಸ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. 2020 ಜನವರಿ 30 ರಂದು ದೇಶದಲ್ಲಿ ಪ್ರಥಮ ಪ್ರಕರಣ ದೃಢಪಟ್ಟ ನಂತರ ಇಲ್ಲಿಯವರೆಗೆ 22 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ವೈರಸ್ ಸೋಂಕು ಮೇಲೆ ದೃಢಪಟ್ಟಿದೆ.
ಜುಲೈ 5 ರಂದು ಭಾರತವು ರಷ್ಯಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಕೊರೋನಾ ಸೋಂಕಿತರಿರುವ ದೇಶ ಎನಿಸಿಕೊಂಡಿತ್ತು.

ಭಾರತದಲ್ಲಿ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಮತ್ತು ರಾಜ್ಯವಾರು ಪ್ರಕರಣಗಳ ಸಂಖ್ಯೆ :
ಭಾರತದಲ್ಲಿ ಕೊರೊನಾವೈರಸ್ ಒಟ್ಟು ಪ್ರಕರಣಗಳ ಸಂಖ್ಯೆ ಆಗಸ್ಟ್ 11 ರ ವರೆಗೆ – 22,62,907
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 1,490,
ಅರುಣಾಚಲ ಪ್ರದೇಶ 2155, ಅಸ್ಸಾಂ 58,837, ಬಿಹಾರ 82,719, ಚಂಡೀಗಢ 1,595, ಛತ್ತೀಸ್‌ಗಡ 12,502, ದಾದರ್ ಮತ್ತು ನಗರ ಹವೇಲಿ 820, ದಮನ್ ಮತ್ತು ಡಿಯು 546, ಗೋವಾ 9,029, ಗುಜರಾತ್ 72,120, ಹರಿಯಾಣ 42,429, ಹಿಮಾಚಲ ಪ್ರದೇಶ 3,434, ಜಾರ್ಖಂಡ್ 18,156, ಕರ್ನಾಟಕ 1,82,354, ಕೇರಳ 35,515, ಲಕ್ಷದ್ವೀಪ 0, ಮಧ್ಯಪ್ರದೇಶ 39,891, ಮಹಾರಾಷ್ಟ್ರ 5,24,513, ಮಣಿಪುರ 3,853, ಮೇಘಾಲಯ 1062, ಮಿಜೋರಾಂ 620, ನಾಗಾಲ್ಯಾಂಡ್ 3,011, ದೆಹಲಿ 1,46,134, ಪುದುಚೇರಿ 5,624, ಪಂಜಾಬ್ 24,889, ರಾಜಸ್ಥಾನ 53,670, ಸಿಕ್ಕಿಂ 910, ತಮಿಳುನಾಡು 3,02,815, ತೆಲಂಗಾಣ 80,751, ತ್ರಿಪುರ 6,226, ಉತ್ತರ ಪ್ರದೇಶ 1,26,722, ಉತ್ತರಾಖಂಡ 10,021, ಪಶ್ಚಿಮ ಬಂಗಾಳ 98,459, ಒಡಿಶಾ 47,455, ಆಂಧ್ರಪ್ರದೇಶ 2,35,525, ಜಮ್ಮು ಮತ್ತು ಕಾಶ್ಮೀರ 25,367, ಲಡಾಖ್ 1688 ಪ್ರಕರಣಗಳು ದಾಖಲಾಗಿದೆ.
ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 20, ಅರುಣಾಚಲ ಪ್ರದೇಶ 3, ಅಸ್ಸಾಂ 145, ಬಿಹಾರ 450, ಚಂಡೀಗಢ 25, ಛತ್ತೀಸ್‌ಗಡ 99, ದಾದರ್ ಮತ್ತು ನಗರ ಹವೇಲಿ 1, ದಮನ್ ಮತ್ತು ಡಿಯು 1, ಗೋವಾ 80, ಗುಜರಾತ್ 2,674, ಹರಿಯಾಣ 489, ಹಿಮಾಚಲ ಪ್ರದೇಶ 15, ಜಾರ್ಖಂಡ್ 177, ಕರ್ನಾಟಕ 3,312, ಕೇರಳ 115, ಲಕ್ಷದ್ವೀಪ 0, ಮಧ್ಯಪ್ರದೇಶ 1015, ಮಹಾರಾಷ್ಟ್ರ 18,050, ಮಣಿಪುರ 11, ಮೇಘಾಲಯ 6, ಮಿಜೋರಾಂ 0, ನಾಗಾಲ್ಯಾಂಡ್ 8, ದೆಹಲಿ 4,131, ಪುದುಚೇರಿ 89, ಪಂಜಾಬ್ 604, ರಾಜಸ್ಥಾನ 800, ಸಿಕ್ಕಿಂ 1, ತಮಿಳುನಾಡು 5,041, ತೆಲಂಗಾಣ 637, ತ್ರಿಪುರ 42, ಉತ್ತರ ಪ್ರದೇಶ 2,120, ಉತ್ತರಾಖಂಡ 134, ಪಶ್ಚಿಮ ಬಂಗಾಳ 2,100, ಒಡಿಶಾ 286, ಆಂಧ್ರಪ್ರದೇಶ 2036, ಜಮ್ಮು ಮತ್ತು ಕಾಶ್ಮೀರ 478, ಲಡಾಖ್ 11.
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಜನರ ಸಂಖ್ಯೆ- 13,78,106. ದೇಶದಲ್ಲಿ ಸೋಂಕಿತ ಜನರನ್ನು ಪತ್ತೆಹಚ್ಚುವ, ಪ್ರತ್ಯೇಕಿಸುವ ಮತ್ತು ಚಿಕಿತ್ಸೆ ನೀಡುವ ಮೂಲಕ ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರವಾಗಿ ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಪ್ರಕರಣಗಳಲ್ಲಿ ದೈನಂದಿನ ಏರಿಕೆ ಆತಂಕಕಾರಿಯಾಗಿದೆ.








