ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾದ ಪರಿಣಾಮ ಕೆಆರ್ ಎಸ್ ಡ್ಯಾಂನ ಹೊರ ಹರಿವಿನಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದ ನದಿ ಪಾತ್ರದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಮೊದಲು ಡ್ಯಾಂನಿಂದ 74 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಈಗ 3 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ.
ಮಳೆ ಕಡಿಮೆಯಾಗಿರೊದ್ರಿಂದ ಒಳ ಹರಿವು ಕೂಡ ಕಡಿಮೆಯಾಗುತ್ತಿದ್ದು, ಡ್ಯಾಂ ಭರ್ತಿಮಾಡಿಕೊಳ್ಳುವ ಸಲುವಾಗಿ ಅಧಿಕಾರಿಗಳು ಹೊರ ಹರಿವು ಇಳಿಸಿದ್ದಾರೆ. ಡ್ಯಾಂ ಸಂಪೂರ್ಣ ಭರ್ತಿಯಾಗಲು ಇನ್ನೂ 4 ಅಡಿ ಬಾಕಿ ಇದೆ. ಪ್ರಸ್ತುತ ಕೆಆರ್ ಎಸ್ ಡ್ಯಾಂ 121.12 ಅಡಿ ಭರ್ತಿಯಾಗಿದ್ದು, ಸುರಕ್ಷಿತಾ ದೃಷ್ಟಿಯಿಂದ ಡ್ಯಾಂ ತುಂಬುವ ಮುನ್ನವೇ ನದಿಗೆ ನೀರು ಬಿಡಲಾಗುತ್ತಿತ್ತು.
ಕೆಆರ್ ಎಸ್ ಡ್ಯಾಂ ಇಂದಿನ ನೀರಿನ ಮಟ್ಟ 121.12 ಅಡಿ ಇದೆ. ಗರಿಷ್ಟ ಮಟ್ಟ 124.80 ಅಡಿ, ಒಳ ಹರಿವು 40,794 ಕ್ಯೂಸೆಕ್, ಹೊರ ಹರಿವು 3575 ಕ್ಯೂಸೆಕ್, ನೀರಿನ ಸಂಗ್ರಹ 44.479, ಗರಿಷ್ಠ ಸಂಗ್ರಹ ಸಾಮರ್ಥ್ಯ 49.50 ಟಿಎಂಸಿ ಇದೆ.








