ಕೊರೊನಾ ಸೋಂಕಿತರ ಹೋಮ್ ಐಸೋಲೇಷನ್ ಹಾಗೂ ಡಿಸ್ಚಾರ್ಜ್ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಡಿಸ್ಚಾರ್ಜ್ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ತರಲಾಗಿದ್ದು, A ಸಿಂಪ್ಟಮ್ಸ್ ಇರುವವರನ್ನ ಹತ್ತು ದಿನಗಳಿಗೆ ಡಿಶ್ಚಾರ್ಜ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಡಿಶ್ಚಾರ್ಜ್ ಆಗುವ ಸಂದರ್ಭದಲ್ಲಿ ಯಾವುದೇ ಕೋವಿಡ್ ಟೆಸ್ಟ್ ಮಾಡುವುದಿಲ್ಲ. ಡಿಶ್ಚಾರ್ಜ್ ಆದ ಬಳಿಕ 14 ದಿನದ ಬದಲಾಗಿ 7 ದಿನ ಮಾತ್ರ ಹೋಮ್ ಕ್ವಾರಂಟೈನ್ ಮಾಡಲಾಗುತ್ತೆ. ಡಿಶ್ಚಾರ್ಜ್ ಆದ ಬಳಿಕ ಸಿಂಪ್ಟಮ್ಸ್ ಕಾಣಿಸಿಕೊಂಡ್ರೆ ಆಪ್ತಮಿತ್ರ ಹೆಲ್ಪ್ ಲೈನ್‌ಗೆ ತಿಳಿಸಬೇಕು. ಕಡಿಮೆ ಅಥವಾ ಸಾಧಾರಣ ರೋಗ ಲಕ್ಷಣ ಇರುವವರಿಗೆ ಹತ್ತನೇ ದಿನಕ್ಕೆ ಡಿಶ್ಚಾರ್ಜ್ ಮಾಡಲು ಸೂಚನೆ ನೀಡಲಾಗಿದೆ. ಆದ್ರೆ ಡಿಶ್ಚಾರ್ಜ್ ಮಾಡೋ ಮೂರು ದಿನ ಮೊದಲು ಗುಣಮುಖ ಆಗಿರಬೇಕು. ಹತ್ತು ದಿನದ ನಂತರವೂ ರೋಗ ಲಕ್ಷಣವಿದ್ದರೆ 17ನೇ ದಿನಕ್ಕೆ ಡಿಶ್ಚಾರ್ಜ್ ಮಾಡುವುದು. ಈ ಸಂದರ್ಭದಲ್ಲಿ ಕೊರೋನಾ ಟೆಸ್ಟ್ ಮಾಡುವುದಿಲ್ಲ. ಡಿಶ್ಚಾರ್ಜ್ ಬಳಿಕ 7 ದಿನ ಹೋಮ್ ಕ್ವಾರಂಟೈನ್, 14 ದಿನ ಟೆಲಿ ಕಾನ್ಫರೆನ್ಸ್ ಮಾಡಬೇಕು. ಹೋಮ್ ಕ್ವಾರಂಟೈನ್ ಆಗುವ ರೋಗಿಗಳಿಗೆ ಹತ್ತು ದಿನ ಮನೆಯಲ್ಲೇ ಇರಬೇಕು ಹಾಗೂ 3 ದಿನದೊಳಗೆ ಜ್ವರ ಬಾರದಂತಿರಬೇಕು. ಬಳಿಕ ಏಳು ದಿನ ಮನೆಯಲ್ಲೇ ಇರಬೇಕಿದ್ದು, ಪಲ್ಸ್ ಚೆಕ್ ಮಾಡಿಸಿಕೊಳ್ಳಬೇಕು. ಕೆಲಸಕ್ಕೆ ಹೋಗುವುದಾದರೆ ಸರ್ಟಿಫಿಕೇಟ್ ಪಡೆಯೋದು ಕಡ್ಡಾಯವಾಗಿದೆ.
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








