ರಾತ್ರೋ ರಾತ್ರಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿರುವ ಡಿಜೆ ಹಳ್ಳಿ ಗಲಭೆ ವೇಳೆ ಅಖಂಡ ಶ್ರೀನಿವಾಸ್ ಅವರ ಮನೆ ಜೊತೆಗೆ ಅಕ್ಕ ಜಯಂತಿ ಮನೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ತಡರಾತ್ರಿ ಮನೆಗೆ ನುಗ್ಗಿದ್ದ ಸುಮಾರು 200 ಜನ ಮನೆಗೆ ಬೆಂಕಿ ಹಚ್ಚಿ ಮನೆಯಲ್ಲಿದ್ದ ಬಂಗಾರ ,ಹಣ ಕಳವು ಮಾಡಿದ್ದಾರೆ. ಒಟ್ಟು 5 ಲಕ್ಷ ರೂಪಾಯಿ ಹಣ, 200 ಗ್ರಾಂ ಬಂಗಾರ, ಬೆಳ್ಳಿ ವಸ್ತುಗಳು ಕಳವಾಗಿದೆ ಎನ್ನಲಾಗಿದೆ. ಗಲಭೆ ವೇಳೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಪುಡಿಪುಡಿಯಾಗಿ ನಾಶವಾಗಿಹೋಗಿದೆ.









