ಬೆಂಗಳೂರಿನಲ್ಲಿನ ಹಿಂಸಾರಕ್ಕೆ ಸಂಬಂಧಪಟ್ಟಂತೆ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನು ಪ್ರಚೋಸುತ್ತದೆ, ಕೋಮು ಸೌಹಾರ್ದತೆಗೆ ಅಡಚಣೆ ಉಂಟುಮಾಡುತ್ತದೆ’ ಹಿಂಸಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಗೋಲಿಬಾರ್ ನಲ್ಲಿ ಬಲಿಯಾದವರ ವಿಚಾರವಾಗಿ ಪ್ರತಿಕ್ರಿಯಿಸಿದ ನಟ ”ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಕುರಿತು ನಡೆಸಿದ ಹಿಂಸಾಚಾರವೂ ಸಮರ್ಥನೀಯವಲ್ಲ. ವಾಕ್ ಸ್ವಾತಂತ್ರ್ಯವನ್ನು ಗರಿಷ್ಠ ಮಟ್ಟಿಗೆ ಎತ್ತಿ ಹಿಡಿಯಬೇಕು ಮತ್ತು ಸರಿಯಾದ ಪ್ರಕ್ರಿಯೆಯ ಮೂಲಕ ವಿರೋಧಿಸಬೇಕು. ಎಲ್ಲಾ ಧರ್ಮಗಳು ಇಸ್ಲಾಂ ಸೇರಿದಂತೆ ವಿಮರ್ಶೆಗೆ ಮುಕ್ತವಾಗಿವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.









