ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಲಾವುದು. ಹೆಚ್ಚುವರಿ ಆಯುಕ್ತರಾದ ಮುರುಗನ್, ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರಕರಣದ ತನಿಖಾ ವರದಿ ಸಲ್ಲಿಸಲಾಗುತ್ತದೆ. ಘಟನೆ ಸಂಬಂಧ ವರದಿ ನೀಡುವಂತೆ ಅಧಿಕಾರಿಗಳಿಗೆ ಗೃಹಸಚಿವ ಸೂಚಿಸಿದ್ದ ಹಿನ್ನೆಲೆ ಗಲಭೆಗೆ ಕಾರಣ, ಗಲಭೆ ಸಿದ್ದತೆ, ಗಲಭೆಯಲ್ಲಿ ನಷ್ಟವಾದ ಆಸ್ತಿ ವಿವರ, ಬಂಧಿತ ಆರೋಪಿಗಳ ಸಂಪೂರ್ಣ ವರದಿಯನ್ನು ಗೃಹ ಸಚಿವ ಬೊಮ್ಮಯಿ ಹಾಗು ಸಿಎಂ ಯಡಿಯೂರಪ್ಪ ಅವರಿಗೆ ವರದಿ ರವಾನಿಸಲಾಗುವುದು.








